ADVERTISEMENT

IPL Cricket 2023: ಎರಡು ಪಂದ್ಯಗಳಿಗೆ ಗುವಾಹಟಿ ಸಜ್ಜು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 2:38 IST
Last Updated 31 ಮಾರ್ಚ್ 2023, 2:38 IST
   

ಗುವಾಹಟಿ (ಪಿಟಿಐ): ಇದೇ ಮೊದಲ ಬಾರಿ ಐಪಿಎಲ್‌ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಗುವಾಹಟಿ ಸಜ್ಜಾಗಿದೆ.

ಐಪಿಎಲ್‌ನ ಎರಡು ಪಂದ್ಯಗಳು ಇಲ್ಲಿನ ಅಸ್ಸಾಂ ಕ್ರಿಕೆಟ್‌ ಸಂಸ್ಥೆ (ಎಸಿಎ) ಕ್ರೀಡಾಂಗಣದಲ್ಲಿ ನಡೆಯಲಿವೆ. ರಾಜಸ್ತಾನ ರಾಯಲ್ಸ್‌ ತಂಡ ತನ್ನ ಎರಡು ‘ಹೋಂ’ ಪಂದ್ಯಗಳನ್ನು ಇಲ್ಲಿ ಆಡಲಿದ್ದು, ಏ.5 ರಂದು ಪಂಜಾಬ್‌ ಕಿಂಗ್ಸ್‌ ಹಾಗೂ ಏ.8 ರಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳನ್ನು ಎದುರಿಸಲಿದೆ.

‘2020 ರಲ್ಲಿ ರಾಜಸ್ತಾನ ತಂಡದ ಎರಡು ಪಂದ್ಯಗಳ ಆತಿಥ್ಯದ ಅವಕಾಶವನ್ನು ನಮಗೆ ನೀಡಲಾಗಿತ್ತು. ಆದರೆ ಕೋವಿಡ್‌ ಕಾರಣ ಆ ವರ್ಷ ಪಂದ್ಯ ನಡೆಯಲಿಲ್ಲ. ಈ ಬಾರಿ ಎರಡು ಪಂದ್ಯಗಳು ಆಯೋಜಿಸುತ್ತಿರುವುದು ಸಂತಸದ ವಿಷಯ’ ಎಂದು ಎಸಿಎ ಕಾರ್ಯದರ್ಶಿ ತ್ರಿದಿಬ್‌ ಕೊನ್ವರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.