ADVERTISEMENT

ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸೆಷ್ಟು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 7:08 IST
Last Updated 21 ಫೆಬ್ರುವರಿ 2026, 7:08 IST
<div class="paragraphs"><p>ಹಾರ್ದಿಕ್ ಪಾಂಡ್ಯ </p></div>

ಹಾರ್ದಿಕ್ ಪಾಂಡ್ಯ

   

ಚಿತ್ರ: ಇನ್‌ಸ್ಟಾಗ್ರಾಂ

ಭಾರತ ಕ್ರಿಕೆಟ್‌ ತಂಡದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಷ್ಟೇ ಅಲ್ಲ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು.

ADVERTISEMENT

ಹಾರ್ದಿಕ್ ಪಾಂಡ್ಯ–ಮಹಿಕಾ ಶರ್ಮಾ

ಮಾಜಿ ಪತ್ನಿ ನತಾಶಾ ಜೊತೆ ವಿಚ್ಛೇದನ ಪಡೆದ ಬಳಿಕ ಪ್ರೇಯಸಿ ಮಹಿಕಾ ಜೊತೆಗೆ ಸುತ್ತಾಡಿದ ಫೋಟೊಗಳನ್ನು ಪಾಂಡ್ಯ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಗೆಳತಿ ಜೊತೆಗೆ ದೂರದ ಪ್ರಯಾಣ, ಬೀಚ್‌ನಲ್ಲಿ ಸುತ್ತಾಟ, ಹುಟ್ಟುಹಬ್ಬದ ಫೋಟೊಗಳು ಹರಿದಾಡುತ್ತಿವೆ.

ಮಹಿಕಾ ಶರ್ಮಾ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ

ಇದರ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಮಹಿಕಾ ಶರ್ಮಾ ಅವರ ವಯಸ್ಸು ಎಷ್ಟಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದರು. ಆದರೆ, ಈಗ ಮಹಿಕಾ ಶರ್ಮಾ ನಿಜವಾದ ವಯಸ್ಸು ಬಹಿರಂಗವಾಗಿದೆ. ಮಹಿತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ವಿಡಿಯೊ ಜೊತೆಗೆ ‘ನನಗೆ 25 ವರ್ಷ’ ಎಂದು ಬರೆದುಕೊಂಡಿದ್ದಾರೆ. ಮಹಿಕಾ ಶರ್ಮಾ ಅವರ ನಿಜವಾದ ವಯಸ್ಸು ತಿಳಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಮಹಿಕಾ ಶರ್ಮಾ, ಹಾರ್ದಿಕ್ ಪಾಂಡ್ಯ

ಅಂದಹಾಗೆ ಹಾರ್ದಿಕ್ ಪಾಂಡ್ಯಗೆ 32 ವರ್ಷ ಆಗಿದ್ದು. ಈ ಇಬ್ಬರ ನಡುವೆ 7 ವರ್ಷ ಅಂತವಿದೆ. ಇನ್ನು ಮಹಿಕಾ ಶರ್ಮಾ ನಟಿ ಕಮ್ ಮಾಡೆಲ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ಇವರು ಇನ್‌ಸ್ಟಾಗ್ರಾಂನಲ್ಲಿ 56 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.