ADVERTISEMENT

ಟಿ20 ರ‍್ಯಾಂಕಿಂಗ್‌: 12ನೇ ಸ್ಥಾನಕ್ಕೆ ಹರ್ಮನ್‌ಪ್ರೀತ್‌

ಪಿಟಿಐ
Published 16 ಜುಲೈ 2024, 16:27 IST
Last Updated 16 ಜುಲೈ 2024, 16:27 IST
ಹರ್ಮನ್‌ಪ್ರೀತ್‌
ಹರ್ಮನ್‌ಪ್ರೀತ್‌   

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಅವರು ಮಂಗಳವಾರ ಪ್ರಕಟಗೊಂಡ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಹರ್ಮನ್‌ಪ್ರೀತ್‌ ಅವರು 613 ಅಂಕಗಳೊಂದಿಗೆ ಮೂರು ಸ್ಥಾನ ಮೇಲೇರಿದ್ದಾರೆ. ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ಶರ್ಮಾ ಅವರೂ ಎರಡು ಸ್ಥಾನ ಬಡ್ತಿ ಪಡೆದು 15ನೇ ಸ್ಥಾನಕ್ಕೆ ಏರಿದ್ದಾರೆ. ಅವರು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಮತ್ತು ಇಂಗ್ಲೆಂಡ್‌ನ ಡ್ಯಾನಿ ವ್ಯಾಟ್ ಅವರನ್ನು ಹಿಂದಿಕ್ಕಿದ್ದಾರೆ.

ಸ್ಮೃತಿ ಮಂದಾನ ಅವರು ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿ ಅವರಾಗಿದ್ದಾರೆ.

ADVERTISEMENT

ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಾಧಾ ಯಾದವ್‌ ಅವರು 8 ಸ್ಥಾನಗಳ ಬಡ್ತಿ ಪಡೆದು 15ನೇ ಸ್ಥಾನಕ್ಕೆ ಏರಿದ್ದಾರೆ. ಪೂಜಾ ವಸ್ತ್ರಕರ್‌ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಕ್ರಮವಾಗಿ 23ನೇ ಮತ್ತು 60ನೇ ಸ್ಥಾನಕ್ಕೆ ಏರಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್‌ಗಳಾದ ಸೋಫಿ ಎಕ್ಲೆಸ್ಟೋನ್ ಮತ್ತು ಸಾರಾ ಗ್ಲೆನ್ ಅವರು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.