ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹಸ್ತಲಾಘವ ನಿರಾಕರಣೆಯ ನಿಲುವು ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಮುಂದುವರೆದಿದೆ.
ಆಪರೇಷನ್ ಸಿಂಧೂರ ನಂತರ ಉಭಯ ದೇಶಗಳ ನಡುವಿನ ಸಂಬಂಧ ಬಿಡಗಾಯಿಸಿದ್ದು, ಪುರುಷರ ಏಷ್ಯಾ ಕಪ್ ಟೂರ್ನಿಯ ವೇಳೆ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಕ್ರಿಕೆಟ್ ಅಂಗಳದಲ್ಲಿನ ನಿಲುವಿಗೆ, ಪರ – ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದವು.
ಇದೀಗ ಅದೇ ಸಂಪ್ರದಾಯ ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರೆದಿದೆ. ಪಾಕಿಸ್ತಾನ ವಿರುದ್ಧ ಟಾಸ್ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕ್ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.
ಟಾಸ್ ವೇಳೆ ಎರಡೂ ತಂಡಗಳ ನಾಯಕಿಯರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು.
ಪಂದ್ಯದ ವೇಳೆ ಪಾಕ್ ಆಟಗಾರ್ತಿಯರೊಂದಿಗೆ ಮೈದಾನದಲ್ಲಿ ಹಸ್ತಲಾಘವ ಮಾಡದಿರುವಂತೆ ಬಿಸಿಸಿಐ ಭಾರತ ಮಹಿಳಾ ತಂಡಕ್ಕೆ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.