ADVERTISEMENT

ಧೋನಿ ಅನುಭವ ಸಂಪತ್ತಿನ ಪ್ರಯೋಜನ ಪಡೆಯಲು ಉತ್ಸುಕರಾಗಿರುವ ಕೊಹ್ಲಿ

ಪಿಟಿಐ
Published 17 ಅಕ್ಟೋಬರ್ 2021, 11:37 IST
Last Updated 17 ಅಕ್ಟೋಬರ್ 2021, 11:37 IST
ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ
ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ   

ದುಬೈ: ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ನೇಮಕಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಉಪಸ್ಥಿತಿಯಿಂದಾಗಿ ಸಂಕೀರ್ಣ ವಿಷಯಗಳತ್ತ ಗಮನ ಹರಿಸಲು ಮತ್ತು ಪ್ರಾಯೋಗಿಕ ಸಲಹೆಯ ಮೂಲಕ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೆರವಾಗಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್‌ನಲ್ಲಿ ಚೆನ್ನೈ ಪರ ನಾಲ್ಕನೇ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ.

ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ ಅವರನ್ನು ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಮಾರ್ಗದರ್ಶಕರನ್ನಾಗಿ ಬಿಸಿಸಿಐ ನೇಮಕಗೊಳಿಸಿತ್ತು.

ವಿಶ್ವಕಪ್ ಟೂರ್ನಿಗೂ ಮುನ್ನ ಐಸಿಸಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೊಹ್ಲಿ, ಧೋನಿ ನೇಮಕದ ಕುರಿತು ಸಂತಸ ವ್ಯಕ್ತಪಡಿಸಿದ್ದು, ಅನೇಕ ವರ್ಷಗಳಲ್ಲಿ ಧೋನಿ ಸಂಪಾದಿಸಿದ ಅನುಭವ ಸಂಪತ್ತಿನ ಪ್ರಯೋಜನ ಪಡೆಯಲುಉತ್ಸುಕರಾಗಿರುವುದಾಗಿ ತಿಳಿಸಿದರು.

'ಧೋನಿ ಅಗಾಧ ಅನುಭವವನ್ನು ಹೊಂದಿದ್ದಾರೆ. ನಮ್ಮೊಂದಿಗೆ ಸೇರಿಕೊಳ್ಳಲು ಅವರೂ ಉತ್ಸುಕರಾಗಿದ್ದಾರೆ. ನಾವು ವೃತ್ತಿಜೀವನ ಆರಂಭಿಸಿದಾಗಿನಿಂದ ಅವರ ಕೆರಿಯರ್ ಮುಗಿಯುವ ವರೆಗೂ ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು' ಎಂದು ತಿಳಿಸಿದರು.

'ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಪ್ರಮುಖ ಟೂರ್ನಿಯನ್ನು ಆಡುವ ಆಟಗಾರರಿಗೆ ಧೋನಿ ಸಾನಿಧ್ಯದಿಂದ ಪ್ರಯೋಜನವಾಗಲಿದೆ. ಸಂಕೀರ್ಣ ವಿಷಯ ಮತ್ತು ಪ್ರಾಯೋಗಿಕ ಸಲಹೆಗಳ ಮೂಲಕ ಆಟವನ್ನು ಸುಧಾರಿಸಲು ನೆರವಾಗಲಿದ್ದಾರೆ. ಅವರ ಉಪಸ್ಥಿತಿಯಿಂದ ಮನೋಬಲ ವೃದ್ಧಿಯಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.