ADVERTISEMENT

ICC T20 WORLD CUP 2022| ಭಾರತ–ಪಾಕ್ ಪಂದ್ಯಕ್ಕೆ ವರುಣನ ಅಡ್ಡಿ?

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 16:29 IST
Last Updated 21 ಅಕ್ಟೋಬರ್ 2022, 16:29 IST
ಭಾರತ ತಂಡದ ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಹಾಗೂ ಆರ್ಷದೀಪ್ ಸಿಂಗ್ 
ಭಾರತ ತಂಡದ ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ಹಾಗೂ ಆರ್ಷದೀಪ್ ಸಿಂಗ್    

ಮೆಲ್ಬರ್ನ್: ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಸಂದರ್ಭದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.

ಸ್ಥಳೀಯ ಹವಾಮಾನ ಇಲಾಖೆಯು ನೀಡಿರುವ ವರದಿಗಳ ಪ್ರಕಾರ ಪಂದ್ಯದ ಅವಧಿಯ ಶೇ 90ರಷ್ಟು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸುಮಾರು ಒಂದರಿಂದ ಐದು ಮಿಲಿಮೀಟರ್‌ ಪ್ರಮಾಣದ ಮಳೆ ಸುರಿಯಬಹುದು.

ಶುಕ್ರವಾರ ಸಂಜೆಯೂ ಮೆಲ್ಬರ್ನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಭಸದ ಮಳೆಯಾಗಿದೆ. ಭಾನುವಾರವೂ ಇದೇ ತರಹದ ವರ್ಷಧಾರೆಯಾಗಬಹುದು ಎನ್ನಲಾಗಿದೆ. ಪಂದ್ಯದ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಬಿಕರಿಯಾಗಿವೆ.ಎಷ್ಟೇ ಮಳೆಯಾದರೂ ಕನಿಷ್ಠ ಐದು ಓವರ್‌ಗಳ ಇನಿಂಗ್ಸ್‌ನ ಪಂದ್ಯ ನಡೆಯುವ ಭರವಸೆಯನ್ನೂ ಇಲ್ಲಿ ಅಭಿಮಾನಿಗಳು ವ್ಯಕ್ತಪಡಿಸುತ್ತಾರೆ.

ADVERTISEMENT

ಗುರುವಾರ ರಾತ್ರಿ ಮೆಲ್ಬರ್ನ್‌ಗೆ ಬಂದಿಳಿದಿರುವ ಉಭಯ ತಂಡಗಳ ಆಟಗಾರರು ಶುಕ್ರವಾರ ಅಭ್ಯಾಸ ನಡೆಸಿದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಉಳಿದ ಬ್ಯಾಟರ್‌ಗಳು ಪಾಕ್ ತಂಡದ ವೇಗಿ ಶಹೀನ್ ಶಾ ಅಫ್ರಿದಿ ಅವರ ಎಸೆತಗಳನ್ನು ಎದುರಿಸುವ ಕೌಶಲವನ್ನು ಅಭ್ಯಾಸ ಮಾಡಿದರು. ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್ ಹಾಗೂ ಉಳಿದ ಬೌಲರ್‌ಗಳು ಬಹಳ ಹೊತ್ತು ಅಭ್ಯಾಸ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.