ADVERTISEMENT

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌: ಜಯ್ ಶಾ, ಕ್ರಿಸ್ಟಿ ಕೊವೆಂಟ್ರಿ ಚರ್ಚೆ

ಪಿಟಿಐ
Published 30 ಅಕ್ಟೋಬರ್ 2025, 16:20 IST
Last Updated 30 ಅಕ್ಟೋಬರ್ 2025, 16:20 IST
<div class="paragraphs"><p>ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಐಒಸಿ ಅಧ್ಯಕ್ಷೆ&nbsp; ಕ್ರಿಸ್ಟಿ ಕೊವೆಂಟ್ರಿ&nbsp;&nbsp;</p></div>

ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಐಒಸಿ ಅಧ್ಯಕ್ಷೆ  ಕ್ರಿಸ್ಟಿ ಕೊವೆಂಟ್ರಿ  

   

ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸ್ಪರ್ಧೆ ಮರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಯ್ ಶಾ ಅವರು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧ್ಯಕ್ಷೆ  ಕ್ರಿಸ್ಟಿ ಕೊವೆಂಟ್ರಿ ಅವರನ್ನು ಲೂಸಾನ್‌ನಲ್ಲಿ ಭೇಟಿಯಾಗಿ ಚರ್ಚಿಸಿದರು.

1900ರ ಪ್ಯಾರಿಸ್ ಕೂಟದಲ್ಲಿ ಮೊದಲ ಬಾರಿ ಕ್ರಿಕೆಟ್‌ ಆಡಿಸಿ, ನಂತರ ಕೈಬಿಡಲಾಗಿತ್ತು. 128 ವರ್ಷಗಳ ನಂತರ ಕ್ರಿಕೆಟ್‌ ಅನ್ನು ಮತ್ತೆ ಸೇರಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಶಾ ಅವರು ಬ್ರಿಸ್ಬೇನ್‌ನಲ್ಲಿ ಕೊವೆಂಟ್ರಿ ಅವರನ್ನು ಭೇಟಿಯಾಗಿದ್ದರು.

ADVERTISEMENT

‘ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುವ ಕುರಿತು ಐಒಸಿ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. ಕ್ರಿಕೆಟ್‌ ಈತನಕ ಸಾಧಿಸಿದ ಪ್ರಗತಿ ಮತ್ತು ಒಲಿಂಪಿಕ್ ಚಳವಳಿಯಲ್ಲಿ ಕ್ರಿಕೆಟ್ ವಹಿಸಬಹುದಾದ ಮಹತ್ವದ ಪಾತ್ರದ ಕುರಿತು ಸಮಾಲೋಚನೆ ನಡೆಸಿದೆವು’ ಎಂದು ಶಾ ಎಕ್ಸ್‌ನಲ್ಲಿ ಬರೆದಿದ್ದಾರೆ.

2028 ಒಲಿಂಪಿಕ್ಸ್‌ನಲ್ಲಿ ತಲಾ ಆರು ತಂಡಗಳು (ಪುರುಷರು ಮತ್ತು ಮಹಿಳೆಯರು) ಸ್ಪರ್ಧಿಸಲಿವೆ. ಟಿ20 ಮಾದರಿಯಲ್ಲಿ ಈ ಪಂದ್ಯಗಳು ನಡೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.