ನವದೆಹಲಿ: ಚಾಂಪಿಯನ್ಸ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತಕ್ಕೆ ಸೋತು ಬೇಗನೇ ಹೊರಬಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಎಲ್ಲೆಡೆಯಿಂದ ಟೀಕಾಪ್ರಹಾರ ಮುಂದುವರಿದಿದೆ. ಭಾರತದ ದಿಗ್ಗಜ ಆಟಗಾರ ಸುನಿಲ್ ಗಾವಸ್ಕರ್ ಅವರು ಈ ಪಾಕ್ ತಂಡ, ಭಾರತ ಬಿ ತಂಡವನ್ನು ಸೋಲಿಸಲೂ ಪರದಾಡಬೇಕಾಗುತಿತ್ತು ಎಂದು ಲೇವಡಿ ಮಾಡಿದ್ದಾರೆ.
‘ನನ್ನ ಪ್ರಕಾರ (ಭಾರತದ) ‘ಬಿ’ ತಂಡ ಕೂಡ ಪಾಕಿಸ್ತಾನ ತಂಡಕ್ಕೆ ಖಂಡಿತಕ್ಕೂ ತೀವ್ರ ಸವಾಲು ಒಡ್ಡುತಿತ್ತು. ಈಗಿನ ಫಾರ್ಮಿನಲ್ಲಿ ಪಾಕ್ ತಂಡಕ್ಕೆ ಬಿ ತಂಡವನ್ನು ಸೋಲಿಸಲೂ ತುಂಬಾ ಕಷ್ಟವಾಗುತಿತ್ತು’ ಎಂದು ‘ಸ್ಪೋರ್ಟ್ಸ್ ಟುಡೇ’ಗೆ ತಿಳಿಸಿದ್ದಾರೆ.
‘ತಾಂತ್ರಿಕವಾಗಿ ಪರಿಣತರಂತೆ ಕಾಣದಿ ದ್ದರೂ, ಹಿಂದೆ ಪಾಕಿಸ್ತಾನದಲ್ಲಿ ಪ್ರತಿಭಾ ನ್ವಿತರು ಆಟಗಾರರು ಕಂಡುಬರುತ್ತಿದ್ದರು’ ಎಂದು ಅವರು ಇಂಜಮಾಮ್ ಉಲ್ ಹಕ್ ಅವರ ಉದಾಹರಣೆ ನೀಡಿದರು.
ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಮತ್ತು ದೇಶಿ ವೈಟ್ ಬಾಲ್ ಟೂರ್ನಿಗಳು ಇದ್ದರೂ ಆ ದೇಶವು ಗುಣಮಟ್ಟದ ಆಟಗಾರರನ್ನು ತಯಾರು ಮಾಡಲು ಪ್ರಯಾಸಪಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.