ADVERTISEMENT

ಬ್ಯಾಟ್ಸ್‌ಮನ್‌ಗಳ ಆರ್ಭಟ: ಇಂಗ್ಲೆಂಡ್‌ ಗೆಲುವಿಗೆ 349ರನ್‌ ಗುರಿ ನೀಡಿದ ಪಾಕ್‌

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:03 IST
Last Updated 3 ಜೂನ್ 2019, 14:03 IST
ಸರ್ಫರಾಜ್‌ ಅಹಮದ್‌ ಆಟದ ವೈಖರಿ
ಸರ್ಫರಾಜ್‌ ಅಹಮದ್‌ ಆಟದ ವೈಖರಿ   

ನಾಟಿಂಗಂ: ಮೊದಲ ಪಂದ್ಯದಲ್ಲಿ ವಿಂಡೀಸ್‌ ಎದುರು ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಸರ್ಫರಾಜ್‌ ಅಹಮದ್‌ ಬಳಗವು ಇಂಗ್ಲೆಂಡ್‌ ವಿರುದ್ಧದಿಟ್ಟ ಹೋರಾಟ ಪ್ರದರ್ಶಿಸಿತು. ಇಂಗ್ಲೆಂಡ್‌ ಗೆಲುವಿಗೆ 349ರನ್‌ಗಳ ಸವಾಲಿನ ಮೊತ್ತ ನೀಡಿದೆ.

ವಿಂಡೀಸ್‌ ಎದುರು ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಸರ್ಫರಾಜ್‌ ಅಹಮದ್‌ ಬಳಗವು ಸೋಮವಾರದ ಪಂದ್ಯದಲ್ಲಿದೊಡ್ಡ ಮೊತ್ತವನ್ನು ಕಲೆಹಾಕಿದೆ.ಟ್ರೆಂಟ್‌ಬ್ರಿಜ್‌ನಲ್ಲಿಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೂ ದಿಟ್ಟ ಹೋರಾಟ ನಡೆಸುತ್ತಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು, ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಇಂಗ್ಲೆಂಡ್‌ ಬೌಲರ್‌ಗಳ ಲೆಕ್ಕಾಚಾರವನ್ನು ಹುಸಿಗೊಳಿಸಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2QFwVtL

ADVERTISEMENT

ಇಮಾನ್‌ ಉಲ್‌ ಹಕ್‌(44) ಹಾಗೂ ಫಕ್ರ್‌ ಜಮಾನ್‌(36) ಜೋಡಿಯ ಆರಂಭಿಕ ಜತೆಯಾಟ ತಂಡಕ್ಕೆ ಆತ್ಮ ವಿಶ್ವಾಸ ತಂದಿತು.

ಮೂರನೇ ಕ್ರಮಾಂಕದಲ್ಲಿ ಅಂಗಳಕ್ಕಿಳಿದಬಾಬರ್‌ ಅಜಂ(66) ಸಹ ಹೋರಾಟ ಮುಂದುವರಿಸಿದರು. ಈ ನಡುವೆ ಮೊಯೀನ್‌ಅಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕಡಿವಾಣ ಹಾಕುತ್ತ ಮುಂದುವರಿದರು. ಮೊಯೀನ್‌ 10 ಓವರ್‌ಗಳಲ್ಲಿ 50 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿದರು.

ಮೊಯೀನ್‌ ಅಲಿ

ತಂಡದ ಮೊತ್ತವನ್ನು 300ರ ಗಡಿ ದಾಟಿಸುವ ಪ್ರಮುಖ ಪಾತ್ರವಹಿಸಿದವರುಮೊಹಮ್ಮದ್‌ ಹಫೀಜ್‌(84) ಹಾಗೂ ಸರ್ಫರಾಜ್‌ ಅಹಮದ್‌(55).

62 ಎಸೆತಗಳನ್ನು ಎದುರಿಸಿದ ಹಫೀಜ್‌ ಎರಡು ಸಿಕ್ಸರ್ ಹಾಗೂ 8 ಬೌಂಡರಿಯೊಂದಿಗೆ 84 ರನ್‌ ಗಳಿಸಿದರು. ಇವರೊಂದಿಗೆ ಜತೆಯಾದ ಸರ್ಫರಾಜ್‌ 44 ಎಸೆತಗಳಲ್ಲಿ ಅರ್ಧ ಶತಕ ದಾಟುವ ಮೂಲಕ ಸವಾಲಿನ ಮೊತ್ತಕ್ಕೆ ಸಾಕ್ಷಿಯಾದರು.

ಅಂತಿಮವಾಗಿ ಪಾಕಿಸ್ತಾನ 50ಓವರ್‌ಗಳಲ್ಲಿ 8ವಿಕೆಟ್‌ ನಷ್ಟಕ್ಕೆ 348ರನ್‌ ಗಳಿಸಿದೆ. ಇಂಗ್ಲೆಂಡ್‌ ಪರ ಮೊಯೀನ್‌ ಅಲಿ, ಕ್ರಿಸ್‌ ಓಕ್ಸ್‌ ತಲಾ 3 ವಿಕೆಟ್‌ ಪಡೆದರೆ, ಮಾರ್ಕ್‌ ವುಡ್‌ 2 ವಿಕೆಟ್‌ ಕಬಳಿಸಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2QFwVtL

ಟ್ರೆಂಟ್‌ಬ್ರಿಜ್‌, ಇಂಗ್ಲೆಂಡ್‌ ಪಾಲಿನ ಅದೃಷ್ಟದ ಅಂಗಳ. ಈ ಮೈದಾನದಲ್ಲಿ ಆಡಿರುವ ಎರಡು ವಿಶ್ವಕಪ್‌ ಪಂದ್ಯಗಳಲ್ಲೂ ಆಂಗ್ಲರ ನಾಡಿನ ತಂಡವು ಗೆಲುವಿನ ಸಿಹಿ ಸವಿದಿದೆ.

2016 ಆಗಸ್ಟ್‌ 30ರಂದು ನಡೆದಿದ್ದ ಪಾಕಿಸ್ತಾನ ಎದುರಿನ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 444ರನ್‌ ಗಳಿಸಿ ವಿಶ್ವದಾಖಲೆ ನಿರ್ಮಿಸಿತ್ತು. ಇದೇ ಅಂಗಳದಲ್ಲಿ 2018 ಜೂನ್‌ 19ರಂದು ಆಯೋಜನೆಯಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 481ರನ್‌ ಕಲೆಹಾಕಿ ವಿಶ್ವ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.