ADVERTISEMENT

ಒಮಾನ್ ಕ್ರಿಕೆಟಿಗ ಅಮಾನತು: ನಿಯಮ ಉಲ್ಲಂಘನೆ ಆರೋಪ

ಪಿಟಿಐ
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST

ದುಬೈ: ಭ್ರಷ್ಟಾಚಾರ ತಡೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಒಮಾನ್ ಕ್ರಿಕೆಟ್ ತಂಡದ ಆಟಗಾರ ಅಬ್ದುಲ್ ರಹೀಂ ಅಲ್ ಬಲೂಷಿ ಅವರನ್ನು ಐಸಿಸಿ ತಾತ್ಕಾಲಿಕವಾಗಿ ಅಮಾನತು ಮಾಡಿದೆ.

‘ಪಂದ್ಯದ ಫಿಕ್ಸಿಂಗ್, ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಅಕ್ರಮ ಪ್ರಯತ್ನ ಸೇರಿದಂತೆ ಒಟ್ಟು ನಾಲ್ಕು ನಿಯಮಗಳನ್ನು ಅಲ್ ಬಲೂಷಿ ಉಲ್ಲಂಘಿಸಿದ್ದಾರೆ’ ಎಂದು ಐಸಿಸಿಯು ತಿಳಿಸಿದೆ.

ತಮ್ಮ ಪರವಾಗಿ ವಿವರಣೆ ನೀಡಲು ಬಲೂಷಿಗೆ 14 ದಿನಗಳ ಕಾಲಾವಕಾಶ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.