ADVERTISEMENT

ಮೊದಲ ಟೆಸ್ಟ್‌ ವೇಳೆ ಅನುಚಿತ ವರ್ತನೆ: ಬೂಮ್ರಾಗೆ ವಾಗ್ದಂಡನೆ, ಡಿಮೆರಿಟ್‌ ಪಾಯಿಂಟ್

ಏಜೆನ್ಸೀಸ್
Published 29 ಜನವರಿ 2024, 15:55 IST
Last Updated 29 ಜನವರಿ 2024, 15:55 IST
ಜಸ್‌ಪ್ರೀತ್ ಬೂಮ್ರಾ 
ಜಸ್‌ಪ್ರೀತ್ ಬೂಮ್ರಾ    

ದುಬೈ: ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್‌ ವೇಳೆ, ಇಂಗ್ಲೆಂಡ್‌ನ ಬ್ಯಾಟರ್ ಒಲಿ ಪೋಪ್‌ ರನ್‌ ಓಡುವಾಗ ‘ತಕ್ಕುದಲ್ಲದ ರೀತಿ ಅಡ್ಡಬಂದಿದ್ದಕ್ಕೆ ಭಾರತದ ವೇಗದ ಬೌಲರ್ ಜಸ್‌ಪ್ರೀತ್‌ ಬೂಮ್ರಾ ಅವರಿಗೆ ಐಸಿಸಿ ಸೋಮವಾರ ವಾಗ್ದಂಡನೆ ವಿಧಿಸಿದೆ. ಜೊತೆಗೆ ಒಂದು ಡಿಮೆರಿಟ್‌ ಪಾಯಿಂಟ್‌ ಸಹ ಹೇರಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ನೀತಿಸಂಹಿತೆಯ ಲೆವೆಲ್‌ 1 ನಡಿ ಬೂಮ್ರಾ ತಪ್ಪೆಸಗಿದ್ದಾರೆ. ಇಂಗ್ಲೆಂಡ್‌ ತಂಡದ ಎರಡನೇ ಇನಿಂಗ್ಸ್‌ ವೇಳೆ (81ನೇ ಓವರ್) ಈ ಪ್ರಸಂಗ ನಡೆದಿತ್ತು. ತಾವು ಬೌಲಿಂಗ್ ಮಾಡಿದ ನಂತರ ಪೋಪ್ ರನ್ನಿಗೆ ಓಡುವ ವೇಳೆ ಬೂಮ್ರಾ ಅಡ್ಡಬಂದು ದೈಹಿಕವಾಗಿ ತಡೆಯಲು ಯತ್ನಿಸಿದ್ದರೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಕ್ರೀಡಾಂಗಣದಲ್ಲಿದ್ದ ಅಂಪೈರ್‌ಗಳಾದ  ಪಾಲ್ ರೈಫೆಲ್ ಮತ್ತು ಕ್ರಿಸ್‌ ಗಫಾನಿ, ಮೂರನೇ ಅಂಪೈರ್‌ ಮರೈಸ್‌ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್‌ ರೋಹನ್ ಪಂಡಿತ್ ಅವರು ಬೂಮ್ರಾ ವಿರುದ್ಧ ದೂರು ಸಲ್ಲಿಸಿದ್ದರು.

ADVERTISEMENT

ವಾಗ್ದಂಡನೆ ಜೊತೆ, ಇದು 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ತಪ್ಪು ಆದ ಕಾರಣ ಅವರ ‘ಶಿಸ್ತಿನ ದಾಖಲೆ’ಗೆ ಒಂದು ಡಿಮೆರಿಟ್‌ ಪಾಯಿಂಟ್‌ ಸೇರಿಸಲಾಗಿದೆ. ಬೂಮ್ರಾ ತಪ್ಪು ಒಪ್ಪಿಕೊಂಡಿದ್ದು, ಕ್ರಮಕ್ಕೆ ಸಮ್ಮತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.