ಗೋಕರ್ಣ: ಇಲ್ಲಿನಕುಡ್ಲೆ ಬೀಚ್ನಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಉತ್ತರ ಕನ್ನಡದ ಯುವಕರ ಖುಷಿ ಇಮ್ಮಡಿಸಿದೆ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಬಾಂಗ್ಲಾದೇಶ ಮೂಲದ ಪರಾಗ್ ಸರ್ಕೆರ್ ಎಂಬ ಫೋಟೊಗ್ರಾಫರ್ ಈ ಫೋಟೊ ಕ್ಲಿಕ್ಕಿಸಿದ್ದಾರೆ. ಗೋಕರ್ಣದಲ್ಲಿ ಮೈದಾನವಿಲ್ಲದ ಕಾರಣ ಜನ ಮನರಂಜನೆಗಾಗಿ ಬೀಚ್ನಲ್ಲಿ ಕ್ರಿಕೆಟ್ ಆಡುವುದು ಸಾಮಾನ್ಯ. ಐಸಿಸಿ ಚಿತ್ರ ಹಂಚಿಕೊಂಡ ಬಳಿಕ ಇಲ್ಲಿನ ಯುವಕರು ಪುಳಕಿತಗೊಂಡಿದ್ದಾರೆ.
ಸೋಮವಾರ ಸಂಜೆ ವೇಳೆಗೆ 24 ಸಾವಿರ ಜನ ಈ ಫೋಟೊ ಲೈಕ್ ಮಾಡಿದ್ದು, 381 ಕಾಮೆಂಟ್ ಮಾಡಿದ್ದಾರೆ. 253 ಜನ ಹಂಚಿಕೊಂಡಿದ್ದಾರೆ. ಈ ಫೋಟೊ ಬಗ್ಗೆ ಫೇಸ್ಬುಕ್ನಲ್ಲಿಪ್ರತಿಕ್ರಿಯಿಸಿರುವ ಕ್ರಿಕೆಟ್ ಪ್ರೇಮಿ ನಿಂಗರಾಜ ಗಾಣಿಗೇರ ಎಂಬುವರು ‘ಗೋಕರ್ಣ ಬೀಚ್ ಅತ್ಯಂತ ಸುಂದರ ತಾಣ. ಇಲ್ಲಿ ಕ್ರಿಕೆಟ್ ಆಡುವುದು ತುಂಬಾ ಖುಷಿಕೊಡುತ್ತದೆ’ ಎಂದು ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.