ADVERTISEMENT

19 ವರ್ಷದೊಳಗಿನವರ ವಿಶ್ವಕಪ್: ಜಪಾನ್‌ ವಿರುದ್ಧ ಭಾರತಕ್ಕೆ ಜಯ

ಪಿಟಿಐ
Published 21 ಜನವರಿ 2020, 16:48 IST
Last Updated 21 ಜನವರಿ 2020, 16:48 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ಬ್ಲೊಮ್‌ಫೊಂಟೀನ್‌: ಭಾರತ ತಂಡಕ್ಕೆ, ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಬಾರಿ ಆಡಿದ ಜಪಾನ್‌ ತಂಡ ಸವಾಲೇ ಆಗಲಿಲ್ಲ. ನಿರೀಕ್ಷೆಯಂತೆ ಟೂರ್ನಿಯ ಎರಡನೇ ಪಂದ್ಯವನ್ನುಮಂಗಳವಾರ 10 ವಿಕೆಟ್‌ಗಳಿಂದ ಗೆದ್ದ ಭಾರತ ಸೂಪರ್‌ ಲೀಗ್‌ ಕ್ವಾರ್ಟರ್‌ಫೈನಲ್‌ಗೆ ಸ್ಥಾನ ಕಾದಿರಿಸಿತು.

ಜಪಾನ್‌ ತಂಡ 22.5 ಓವರುಗಳಲ್ಲಿ ಕೇವಲ 41 ರನ್‌ಗಳಿಗೆ ಉರುಳಿತು. ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ ನಾಲ್ಕು ವಿಕೆಟ್‌ಗಳನ್ನು (8–3–5–4) ಕಬಳಿಸಿದರು. ಯಾರೂ ಎರಡಂಕಿಯ ಮೊತ್ತ ಗಳಿಸಲಿಲ್ಲ. ಇತರೆ ರನ್‌ಗಳ ರೂಪದಲ್ಲಿ 19 ರನ್‌ಗಳು (ಲೆಗ್‌ಬೈ 7, ವೈಡ್‌ 12) ಬಂದಿದ್ದವು!

ಭಾರತ ಕೇವಲ 4.5 ಓವರುಗಳಲ್ಲಿ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿತು. ಯಶಸ್ವಿ ಜೈಸ್ವಾಲ್‌ ಮತ್ತು ಕುಶಾಗ್ರ ರಾವತ್‌ ಕ್ರಮವಾಗಿ 29 ಮತ್ತು 13 ರನ್‌ ಗಳಿಸಿ ಅಜೇಯರಾಗುಳಿದರು.

ADVERTISEMENT

ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮೇಲೆ ಜಯಗಳಿಸಿದ್ದ ಭಾರತ ‘ಬಿ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯವನ್ನು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ಸ್ಕೋರುಗಳು: ಜಪಾನ್‌: 22.5 ಓವರುಗಳಲ್ಲಿ 41 (ರವಿ ಬಿಷ್ಣೋಯಿ 5ಕ್ಕೆ4, ಕಾರ್ತಿಕ್‌ ತ್ಯಾಗಿ 10ಕ್ಕೆ3, ಆಕಾಶ್‌ ಸಿಂಗ್‌ 11ಕ್ಕೆ2); ಭಾರತ: 4.5 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 42 (ಯಶಸ್ವಿ ಜೈಸ್ವಾಲ್‌ ಔಟಾಗದೇ 29, ಕುಮಾರ್‌ ಕುಶಾಗ್ರ ಔಟಾಗದೇ 13).

ರಕಿಬುಲ್‌ ಹ್ಯಾಟ್ರಿಕ್‌– ಬಾಂಗ್ಲಾದೇಶಕ್ಕೆ ಜಯ: ಬಾಂಗ್ಲಾದೇಶ, ಪೋಚೆಸ್ಟ್ರೂಮ್‌ನಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ಮೇಲೆ ಏಳು ವಿಕೆಟ್‌ಗಳ ಜಯಗಳಿಸಿತು. ಇದು ಬಾಂಗ್ಲಾದೇಶಕ್ಕೆ ಸತತ ಎರಡನೇ ಜಯ.

ಸ್ಪಿನ್ನರ್‌ ರಕಿಬುಲ್‌ (20ಕ್ಕೆ4) ಅವರ ಸತತ ಎಸೆತಗಳಲ್ಲಿ ಕೆಸ್ ಸಜ್ಜಾದ್‌, ಲೈಲ್ ರಾಬರ್ಟ್‌ಸನ್‌ ಮತ್ತು ಚಾರ್ಲಿ ಪೀಟ್‌ ಅವರನ್ನು ಸೋಲಿಸಿದರು.

ಸ್ಕೋರುಗಳು: ಸ್ಕಾಟ್ಲೆಂಡ್‌: 30.3 ಓವರುಗಳಲ್ಲಿ 89 (ಸೈಯ್ಯದ್‌ ಶಾ 28; ರಕಿಬುಲ್‌ ಹಸನ್‌ 20ಕ್ಕೆ4, ಶರೀಫುಲ್ ಇಸ್ಲಾಂ 13ಕ್ಕೆ2, ತಂಜೀಮ್‌ ಹಸನ್‌ ಶಕೀಬ್‌ 26ಕ್ಕೆ2); ಬಾಂಗ್ಲಾದೇಶ: 16.4 ಓವರುಗಳಲ್ಲಿ 3 ವಿಕೆಟ್‌ಗೆ 91 (ಪರ್ವೇಜ್‌ ಹುಸೇನ್‌ 25, ಮಹಮದುಲ್‌ ಹಸನ್‌ ಜಾಯ್‌ ಔಟಾಗದೇ 35; ಸಿಯಾನ್‌ ಫಿಷರ್ ಕಿಯೋಗ್‌ 27ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.