ADVERTISEMENT

ಟಿ20 ವಿಶ್ವಕಪ್‌: ಭಾರತಕ್ಕೆ ದೊಡ್ಡ ಗೆಲುವು ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 22:30 IST
Last Updated 19 ಫೆಬ್ರುವರಿ 2023, 22:30 IST
ರಿಚಾ ಘೋಷ್‌– ಎಎಫ್‌ಪಿ ಚಿತ್ರ
ರಿಚಾ ಘೋಷ್‌– ಎಎಫ್‌ಪಿ ಚಿತ್ರ   

ಗೆಬೆರಾ, ದಕ್ಷಿಣ ಆಫ್ರಿಕಾ: ಸೆಮಿಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ಐರ್ಲೆಂಡ್‌ಗೆ ಮುಖಾಮುಖಿಯಾಗಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 11 ರನ್‌ಗಳಿಂದ ಸೋತಿದ್ದ ಭಾರತ, ಟೂರ್ನಿಯಲ್ಲಿ ಮೊದಲ ಬಾರಿ ನಿರಾಸೆ ಅನುಭವಿಸಿತ್ತು. ಹರ್ಮನ್‌ಪ್ರೀತ್ ಕೌರ್‌ ನಾಯಕತ್ವದ ಭಾರತ, ಸದ್ಯ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಕಲೆಹಾಕಿದ್ದು, ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್‌ ಈಗಾಗಲೇ ಸೆಮಿಫೈನಲ್‌ ತಲುಪಿದೆ.

ಭಾರತ ತಂಡದ ಪರ ಇದುವರೆಗೆ ವಿಕೆಟ್‌ ಕೀಪರ್ ರಿಚಾ ಘೋಷ್‌ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಅವರಿಗೆ ಉಳಿದವರ ಬೆಂಬಲ ಸಿಗಬೇಕಿದೆ. ರಾಜೇಶ್ವರಿ ಗಾಯಕವಾಡ, ಪೂಜಾ ವಸ್ತ್ರಕರ್ ಮತ್ತು ರಾಧಾ ಯಾದವ್‌ ಬೌಲಿಂಗ್‌ನಲ್ಲಿ ಕೊಡುಗೆ ನೀಡಬೇಕಿದೆ. ಬಿ ಗುಂಪಿನಲ್ಲಿರುವ ಪಾಕಿಸ್ತಾನವು ಎರಡು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಕಲೆ ಹಾಕಿದ್ದು, ಉಳಿದೆ ರಡು ಪಂದ್ಯಗಳನ್ನು ಗೆದ್ದರೆ ಆ ತಂಡಕ್ಕೂ ಸೆಮಿಯ ಅವಕಾಶವಿದೆ. ಹೀಗಾಗಿ ಭಾರತ ದೊಡ್ಡ ಅಂತರದ ಜಯ ಸಾಧಿಸಿ ರನ್‌ರೇಟ್‌ ಉತ್ತಮಪಡಿಸಿಕೊಳ್ಳಬೇಕಿದೆ. ಐರ್ಲೆಂಡ್‌ ಈಗಾಗಲೇ ನಾಲ್ಕರ ಘಟ್ಟದ ಸ್ಪರ್ಧೆಯಿಂದ ಹೊರಬಿದ್ದಿದ್ದು, ಸಮಾಧಾನದ ಗೆಲುವಿಗಾಗಿ ಪ್ರಯತ್ನಿಸಲಿದೆ.

ADVERTISEMENT

ಪಂದ್ಯ ಆರಂಭ: ಸಂಜೆ 6.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.