ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಪರಾಭವಗೊಂಡಿತು. ಈ ಮೂಲಕಭಾರತದ ವಿಶ್ವಕಪ್ ಅಭಿಯಾನ ಅಂತ್ಯವಾಯಿತು.
ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್ಗಳ ಜಯ ಸಾಧಿಸಿ ಉಪಾಂತ್ಯ ಪಂದ್ಯಕ್ಕೆ ಲಗ್ಗೆ ಹಾಕಿತು. ಅಂತಿಮ ಓವರ್ನ ಕೊನೆಯ ಬಾಲ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 1 ರನ್ ಅವಶ್ಯ ಇತ್ತು. ಈ ಹಂತದಲ್ಲಿಮಿಗ್ನಾನ್ ಡು ಪ್ರೀಜ್ ಬೌಂಡರಿ ಬಾರಿಸಿ ಆಫ್ರಿಕಾಗೆ ಗೆಲುವಿನ ಸಿಹಿ ಹಂಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 274ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ 3 ವಿಕೆಟ್ಗಳ ಜಯ ಕಂಡಿತು.
ಸಂಕ್ಷಿಪ್ತ ಸ್ಕೋರ್...
ಭಾರತ: 274/7 (50 ಓವರ್)
ದಕ್ಷಿಣ ಆಫ್ರಿಕಾ: 275/7 (50 ಓವರ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.