ADVERTISEMENT

ಮಹಿಳಾ ಏಕದಿನ ವಿಶ್ವಕಪ್‌: ತಂಡಗಳ ಸಂಖ್ಯೆ 10ಕ್ಕೆ

ಪಿಟಿಐ
Published 7 ನವೆಂಬರ್ 2025, 16:00 IST
Last Updated 7 ನವೆಂಬರ್ 2025, 16:00 IST
<div class="paragraphs"><p>ಮಹಿಳಾ ಏಕದಿನ ವಿಶ್ವಕಪ್‌</p></div>

ಮಹಿಳಾ ಏಕದಿನ ವಿಶ್ವಕಪ್‌

   

ದುಬೈ: ಮಹಿಳಾ ಏಕದಿನ ವಿಶ್ವಕಪ್‌ನ ಮುಂದಿನ ಆವೃತ್ತಿಯಲ್ಲಿ ಹತ್ತು ತಂಡಗಳು ಇರಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಶುಕ್ರವಾರ ತಿಳಿಸಿದೆ.

ಇತ್ತೀಚಿಗೆ ಭಾರತ– ಶ್ರೀಲಂಕಾ ಆತಿಥ್ಯದಲ್ಲಿ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ಎಂಟು ತಂಡಗಳು ರೌಂಡ್‌ರಾಬಿನ್ ಮಾದರಿಯಲ್ಲಿ ಆಡಿದ್ದವು. ಭಾರತ ನವೆಂಬರ್‌ 2ರಂದು ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಈ ವಿಶ್ವಕಪ್‌ಗೆ ದೊರೆತ ಉತ್ತಮ ಸ್ಪಂದನೆ ಪರಿಗಣಿಸಿ ತಂಡಗಳ ಸಂಖ್ಯೆಯನ್ನು ಐಸಿಸಿ ಹೆಚ್ಚಿಸಿದೆ.

ADVERTISEMENT

‘ವಿವಿಧ ಕ್ರೀಡಾಂಗಣಗಳಲ್ಲಿ ಸುಮಾರು 3 ಲಕ್ಷ ಮಂದಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಇದು ಯಾವುದೇ ಮಹಿಳಾ ಕ್ರಿಕೆಟ್‌ ಟೂರ್ನಿಯ ದಾಖಲೆಯಾಗಿದೆ. ವಿಶ್ವದಾದ್ಯಂತ ಒಟ್ಟು ವೀಕ್ಷಣೆಯಲ್ಲೂ ದಾಖಲೆಯಾಗಿದೆ. ಭಾರತದಲ್ಲೇ 50 ಕೋಟಿ ಜನ ವಿವಿಧ ಮಾಧ್ಯಮಗಳಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ’ ಎಂದು ಐಸಿಸಿ ಹೇಳಿಕೆ ತಿಳಿಸಿದೆ.

ಹೆಚ್ಚಿದ ಆದಾಯವನ್ನು ಐಸಿಸಿಯು ಸದಸ್ಯ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ನೀಡುವ ನಿಧಿಯನ್ನು ಶೇ 10ರಷ್ಟು ಹೆಚ್ಚಿಸಲು ವಿತರಿಸಲೂ ಐಸಿಸಿ ಮಂಡಳಿಯಲ್ಲಿ ನಿರ್ಧರಿಸಲಾಯಿತು.

ಮಿಥಾಲಿಗೆ ಅವಕಾಶ:

ಐಸಿಸಿ ಮಹಿಳಾ ಕ್ರಿಕೆಟ್‌ ಸಮಿತಿಯಲ್ಲಿ ಸದಸ್ಯರ ನೇಮಕವನ್ನು ಸ್ಥಿರೀಕರಿಸಿತು. ಆಶ್ಲೆ ಡಿಸಿಲ್ವ, ಮಿಥಾಲಿ ರಾಜ್‌, ಅಮೋಲ್ ಮಜುಂದಾರ್, ಬೆನ್‌ ಸಾಯರ್‌, ಚಾರ್ಲೊಟೆ ಎಡ್ವರ್ಡ್ಸ್‌ ಮತ್ತು ಸಲಾ ಸ್ಟೆಲ್ಲಾ ಅವರು ಸಮಿತಿ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.