ಮಾರ್ನಸ್ ಲಾಬುಷೇನ್, ಮೊಹಮ್ಮದ್ ಸಿರಾಜ್
(ಚಿತ್ರ ಕೃಪೆ: X/@BCCI)
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಕಾವೇರಿದ ವಾತಾವರಣ ಸೃಷ್ಟಿಯಾಗಿದೆ.
ಮೊಹಮ್ಮದ್ ಸಿರಾಜ್ ಹಾಗೂ ಮಾರ್ನಸ್ ಲಾಬುಷೇನ್ ವಿಕೆಟ್‌ನ ಬೇಲ್ಸ್ ಬದಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಬ್ಬರು ಪರಸ್ಪರ ದಿಟ್ಟಿಸಿ ನೋಡುವುದು, ಪರಸ್ಪರ ತೆಗಳಿಕೆ ನೋಡುಗರಲ್ಲಿ ಮನರಂಜನೆಗೆ ಸಾಕ್ಷಿಯಾಯಿತು.
ಮಾರ್ನಸ್ ಬ್ಯಾಟಿಂಗ್ ಮಾಡುವ ಕಡೆಯತ್ತ ತೆರಳಿದ ಸಿರಾಜ್, ಮೊದಲು ವಿಕೆಟ್‌ನ ಬೇಲ್ಸ್ ಬದಲಿಸಿದರು. ಬಳಿಕ ಅಲ್ಲಿಂದ ತೆರಳಿದರು.
ಸಿರಾಜ್ ಹೋದ ಬೆನ್ನಲ್ಲೇ ಮಾರ್ನಸ್ ಕೂಡ ಅದೇ ವಿಕೆಟ್‌ನ ಬೇಲ್ಸ್ ಬದಲಿಸಿದ್ದಾರೆ. ಆದರೆ ಮಾರ್ನಸ್ ಆಟ ಹೆಚ್ಚು ಹೊತ್ತು ನಿಲ್ಲನಿಲ್ಲ. ನಿತೀಶ್ ಕುಮಾರ್ ರೆಡ್ಡಿ ದಾಳಿಯಲ್ಲಿ 12 ರನ್ ಗಳಿಸಿ ಔಟ್ ಆದರು.
ಈ ನಡುವೆ ಬ್ರಿಸ್ಬೇನ್‌ನಲ್ಲಿ ಸಿರಾಜ್‌ಗೆ ಮತ್ತೆ ಕಹಿ ಅನುಭವ ಎದುರಾಗಿದೆ. ಸ್ಟೇಡಿಯಂನಲ್ಲಿ ಆಸೀಸ್ ಪ್ರೇಕ್ಷಕರು ನಿರಂತರವಾಗಿ ಹೀಯಾಳಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂಬಂಧ ವಿಡಿಯೊ ಹರಿದಾಡುತ್ತಿದೆ.
ಮಳೆಯಿಂದಾಗಿ ಮೊದಲ ದಿನದಾಟ ಬಹುತೇಕ ಸ್ಥಗಿತಗೊಂಡಿತ್ತು. ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿರುವ ಆಸ್ಟ್ರೇಲಿಯಾ ತಾಜಾ ವರದಿಯ ವೇಳೆ 40 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.