ADVERTISEMENT

T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್; ದಾಖಲೆಯ ಸನಿಹದಲ್ಲಿ ಹಿಟ್‌ಮ್ಯಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 16:02 IST
Last Updated 19 ಸೆಪ್ಟೆಂಬರ್ 2022, 16:02 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಮೊಹಾಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟ್ವೆಂಟಿ-20 ಸರಣಿಯು ಮೊಹಾಲಿಯಲ್ಲಿ ಮಂಗಳವಾರ ಆರಂಭವಾಗಲಿದೆ.

ಈ ಸರಣಿಯಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಗದೊಂದು ಮೈಲಿಗಲ್ಲು ಎದುರು ನೋಡುತ್ತಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ಕೇವಲ ಎರಡು ಸಿಕ್ಸರ್‌ಗಳ ಅಗತ್ಯವಿದೆ.

ADVERTISEMENT

ರೋಹಿತ್ ಶರ್ಮಾ ಇದುವರೆಗೆ 136 ಪಂದ್ಯಗಳಲ್ಲಿ (128 ಇನ್ನಿಂಗ್ಸ್) 171 ಸಿಕ್ಸರ್ ಸಿಡಿಸಿದ್ದಾರೆ.

ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾಜಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಒಟ್ಟು 172 ಸಿಕ್ಸರ್ (121 ಪಂದ್ಯ, 117 ಇನ್ನಿಂಗ್ಸ್) ಗಳಿಸಿದ್ದಾರೆ.

ಆಸ್ಟೇಲಿಯಾ ವಿರುದ್ಧ ತವರಿನಲ್ಲಿ ಸಾಗಲಿರುವ ಮೂರು ಪಂದ್ಯಗಳ ಸರಣಿಯಲ್ಲೇ ರೋಹಿತ್ ಈ ದಾಖಲೆ ಮುರಿಯುವ ಇರಾದೆಯಲ್ಲಿದ್ದಾರೆ.

ಭಾರತದ ಪರ ರೋಹಿತ್ ನಂತರದ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 104 ಸಿಕ್ಸರ್ ಬಾರಿಸಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸರದಾರರು:
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 172
ರೋಹಿತ್ ಶರ್ಮಾ (ಭಾರತ): 171
ಕ್ರಿಸ್ ಗೇಲ್ (ವೆಸ್ಟ್‌ ಇಂಡೀಸ್): 124
ಇಯಾನ್ ಮಾರ್ಗನ್ (ಇಂಗ್ಲೆಂಡ್): 120
ಆ್ಯರನ್ ಫಿಂಚ್ (ಆಸ್ಟ್ರೇಲಿಯಾ): 117
ಪೌಲ್ ಸ್ಟಿರ್ಲಿಂಗ್ (ಐರ್ಲೆಂಡ್): 111
ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್): 110
ಕಾಲಿನ್ ಮುನ್ರೊ (ನ್ಯೂಜಿಲೆಂಡ್): 107
ವಿರಾಟ್ ಕೊಹ್ಲಿ (ಭಾರತ): 104
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.