ಶತಕದ ಬಳಿಕ ರಿಷಭ್ ಪಂತ್ ಸಂಭ್ರಮ
(ರಾಯಿಟರ್ಸ್ ಚಿತ್ರ)
ಲೀಡ್ಸ್: ರಿಷಭ್ ಪಂತ್ ಅವರು ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್–ಬ್ಯಾಟರ್ ಎನಿಸಿದ್ದಾರೆ.
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅವರು 134 ರನ್ ಬಾರಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ 118 ರನ್ ಗಳಿಸಿದರು.
2001ರಲ್ಲಿ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಹರಾರೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 141 ಮತ್ತು ಅಜೇಯ 199 ರನ್ ಗಳಿಸಿದ್ದರು.
ಹಾಗೆಯೇ 2019ರಲ್ಲಿ ಸ್ಟೀವನ್ ಸ್ಮಿತ್ ನಂತರ ಆಂಗ್ಲರ ನೆಲದಲ್ಲಿ ಪಂದ್ಯವೊಂದರಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು.
ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಎಂಟನೇ ಶತಕದ ಸಾಧನೆ ಮಾಡಿದ್ದಾರೆ. ಈ ಪೈಕಿ ಆರು ಶತಕಗಳು ಸೇನಾ ದೇಶಗಳಲ್ಲಿ (ದ.ಆಫ್ರಿಕಾ. ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದಾಖಲಾಗಿರುವುದು ಗಮನಾರ್ಹ. ಇನ್ನು ಆಂಗ್ಲರ ಮಣ್ಣಿನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
ಐದು ಶತಕ: ಇದೇ ಮೊದಲು
ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರರು 5 ಶತಕ ಬಾರಿಸಿದ್ದು ಇದೇ ಮೊದಲು. ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಪಂತ್ ಮತ್ತು ಕೆ.ಎಲ್. ರಾಹುಲ್ ಶತಕ ದಾಖಲಿಸಿದರು.
ಈ ಹಿಂದೆ ಆಸ್ಟ್ರೇಲಿಯಾ ತಂಡ ಮಾತ್ರ ದೇಶದಿಂದ ಹೊರಗೆ ಈ ಸಾಧನೆ ಮಾಡಿತ್ತು. 1951ರಲ್ಲಿ ಜಮೈಕಾದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಐವರು (ಕಾಲಿನ್ ಮೆಕ್‌ಡೊನಾಲ್ಡ್, ನೀಲ್ ಹಾರ್ವಿ, ಕೀತ್ ಮಿಲ್ಲರ್, ರಾನ್ ಅರ್ಚರ್ ಮತ್ತು ರಿಚಿ ಬೆನೊ) ಶತಕ ಬಾರಿಸಿದ್ದರು.
ರಿಷಭ್ ಪಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.