ADVERTISEMENT

Ind VS Eng 4th Test: ಭಾರತ 191ಕ್ಕೆ ಆಲೌಟ್, ಆಂಗ್ಲರಿಗೆ ಆಘಾತ ನೀಡಿದ ಬೂಮ್ರಾ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:48 IST
Last Updated 2 ಸೆಪ್ಟೆಂಬರ್ 2021, 19:48 IST
ವಿಕೆಟ್ ಪಡೆದ ಸಂಭ್ರಮದಲ್ಲಿ ಬೂಮ್ರಾ: ಎಎಫ್‌ಪಿ ಚಿತ್ರ
ವಿಕೆಟ್ ಪಡೆದ ಸಂಭ್ರಮದಲ್ಲಿ ಬೂಮ್ರಾ: ಎಎಫ್‌ಪಿ ಚಿತ್ರ   

ಓವಲ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆಲೌಟ್ ಆಗಿದೆ.

ನಾಯಕ ವಿರಾಟ್ ಕೊಹ್ಲಿ(50) ಬಿಟ್ಟರೆ ಬೇರೆ ಯಾವ ಅಗ್ರ ಕ್ರಮಾಂಕದ ಆಟಗಾರರಿಂದಲೂ ಹೇಳಿಕೊಳ್ಳುವಂತಹ ಆಟ ಬರಲಿಲ್ಲ. ಕೆ.ಎಲ್. ರಾಹುಲ್ 17, ಅಜಿಂಕ್ಯ ರಹಾನೆ 14, ರೋಹಿತ್ ಶರ್ಮಾ 11ರನ್ ಗಳಿಸಿದರು. 3ನೇ ಟೆಸ್ಟ್ ಪಂದ್ಯದ ಹೀನಾಯ ಪತನವನ್ನು ಮತ್ತೆ ನೆನಪಿಸಿದರು.

ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬ್ಯಾಟ್ಸ್‌ಮನ್‌ಗಳೇ ನಾಚುವಂತೆ ಬ್ಯಾಟ್ ಬೀಸಿದರು. 36 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 57 ರನ್ ಸಿಡಿಸಿ ತಂಡದ ಮೊತ್ತ 190ರ ಗಡಿ ದಾಟುವಲ್ಲಿ ನೆರವಾದರು.

ADVERTISEMENT

ಭಾರತದ 191 ರನ್‌ಗೆ ಉತ್ತರವಾಗಿ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್‌ ಗಳಿಸಿದೆ.

ಆರಂಭಿಕರಾದ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್‌ಗೆ ವೇಗಿ ಜಸ್‌ಪ್ರೀತ್ ಬೂಮ್ರಾ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಇತ್ತ ನಾಯಕ ಜೋ ರೂಟ್‌ ಅವರನ್ನು ಉಮೇಶ್‌ ಯಾದವ್‌ ಔಟ್‌ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್191

ಶಾರ್ದೂಲ್ ಠಾಕೂರ್ – 57

ವಿರಾಟ್ ಕೊಹ್ಲಿ – 50

ಬೌಲಿಂಗ್:
ಕ್ರಿಸ್ ವೋಕ್ಸ್: 55/4

ಒಲಿ ರಾಬಿನ್ಸನ್: 38/3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.