ADVERTISEMENT

100ನೇ ಟೆಸ್ಟ್‌ನಲ್ಲಿ ಅಶ್ವಿನ್‌ಗೆ 4 ವಿಕೆಟ್; ಕುಲದೀಪ್ 50 ವಿಕೆಟ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2024, 10:14 IST
Last Updated 7 ಮಾರ್ಚ್ 2024, 10:14 IST
<div class="paragraphs"><p>100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್‌ಗೆ ಸ್ಮರಣಿಕೆ ನೀಡಿದ ಕೋಚ್ ದ್ರಾವಿಡ್</p></div>

100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್‌ಗೆ ಸ್ಮರಣಿಕೆ ನೀಡಿದ ಕೋಚ್ ದ್ರಾವಿಡ್

   

(ಚಿತ್ರಕೃಪೆ: X/@BCCI )

ಧರ್ಮಶಾಲಾ: 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ.

ADVERTISEMENT

ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಪಂದ್ಯವನ್ನು ಅಶ್ವಿನ್ ಸ್ಮರಣೀಯವಾಗಿಸಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ಅವರು ಅಶ್ವಿನ್‌ ಅವರಿಗೆ 100ನೇ ಟೆಸ್ಟ್ ಪಂದ್ಯದ ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಪತ್ನಿ ಹಾಗೂ ಮಕ್ಕಳು ಜೊತೆಗಿದ್ದರು.

ಬಳಿಕ ಟೀಮ್ ಇಂಡಿಯಾ ಆಟಗಾರರಿಂದ 'ಗಾರ್ಡ್ ಆಫ್ ಆನರ್' ಪಡೆದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೇ ಅಶ್ವಿನ್ 500 ವಿಕೆಟ್‌ಗಳ ಸಾಧನೆ ಮಾಡಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಬಳಿಕ 500 ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಎನಿಸಿದ್ದರು.

ಕುಲದೀಪ್ 50 ವಿಕೆಟ್ ಸಾಧನೆ...

ಮತ್ತೊಂದೆಡೆ ಧರ್ಮಶಾಲಾ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ ಕುಲದೀಪ್, ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್‌‌ಗಳನ್ನು ಪೂರ್ಣಗೊಳಿಸಿದ್ದಾರೆ.

ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜಾನಿ ಬೆಸ್ಟೊ ಹಾಗೂ ನಾಯಕ ಬೆನ್ ಸ್ಟೋಕ್ಸ್ ವಿಕೆಟ್‌ಗಳನ್ನು ಕುಲದೀಪ್ ಯಾದವ್ ಕಬಳಿಸಿದರು.

ಪರಿಣಾಮ ಧರ್ಮಶಾಲಾ ಟೆಸ್ಟ್ ಪಂದ್ಯದ ಮೊದಲ ದಿನದಲ್ಲೇ ಇಂಗ್ಲೆಂಡ್ 218 ರನ್‌ಗಳಿಗೆ ಆಲೌಟ್ ಆಗಿದೆ. ಕುಲದೀಪ್ 72 ರನ್ ತೆತ್ತು ಐದು ಮತ್ತು ಅಶ್ವಿನ್ 51 ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದರು.

ದೇವದತ್ತ ಪಡಿಕ್ಕಲ್ ಪದಾರ್ಪಣೆ...

ಅಶ್ವಿನ್ ಅವರ 100ನೇ ಟೆಸ್ಟ್ ಪಂದ್ಯದಲ್ಲೇ ಕರ್ನಾಟಕದ ಯುವ ಭರವಸೆಯ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.