ADVERTISEMENT

Ind vs SA ಟಿ20 ಸರಣಿಯಿಂದ ಹೊರಗುಳಿದ ಕೆ.ಎಲ್‌.ರಾಹುಲ್‌; ಪಂತ್‌ಗೆ ತಂಡದ ಸಾರಥ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2022, 13:34 IST
Last Updated 8 ಜೂನ್ 2022, 13:34 IST
ರಿಷಭ್‌ ಪಂತ್‌ ಮತ್ತು ಕೆ.ಎಲ್‌.ರಾಹುಲ್‌
ರಿಷಭ್‌ ಪಂತ್‌ ಮತ್ತು ಕೆ.ಎಲ್‌.ರಾಹುಲ್‌   

ನವದೆಹಲಿ: ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯಿಂದ ಭಾರತ ತಂಡದ ನಾಯಕ ಕೆ.ಎಲ್‌.ರಾಹುಲ್‌ ಹೊರಗುಳಿಯಲಿದ್ದಾರೆ. ಸರಣಿ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಈ ನಿರ್ಧಾರ ಹೊರಬಿದ್ದಿದೆ.

ಗಾಯದ ಸಮಸ್ಯೆಯಿಂದಾಗಿ ರಾಹುಲ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ವಿಕೆಟ್‌ ಕೀಪರ್‌, ಬ್ಯಾಟರ್‌ ರಿಷಭ್‌ ಪಂತ್‌ ಅವರಿಗೆ ತಂಡದ ನಾಯಕತ್ವದ ಹೊಣೆ ನೀಡಿದ್ದು, ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಗುರುವಾರದಿಂದ ಟಿ20 ಕ್ರಿಕೆಟ್‌ ಸರಣಿಯು ಆರಂಭವಾಗಲಿದ್ದು, ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳಾಗಿ ಋತುರಾಜ್‌ ಗಾಯಕ್‌ವಾಡ್‌ ಮತ್ತು ಇಶಾನ್‌ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ADVERTISEMENT

ಬಿರುಸಿನ ಆಟದಿಂದ ಗುರುತಿಸಿಕೊಂಡಿರುವ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದ ಉಪ ನಾಯಕನನ್ನಾಗಿ ಬಿಸಿಸಿಐ ಹೆಸರಿಸಿದೆ.

ಎಡಗೈ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಅವರೂ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ ಬ್ಯಾಟಿಂಗ್‌ ಅಭ್ಯಾಸದ ವೇಳೆ ಬಲಗೈಗೆ ಗಾಯ ಮಾಡಿಕೊಂಡಿದ್ದು, ಅವರೂ ಸಹ ಈ ಸರಣಿಯಿಂದ ಹೊರಗುಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.