ADVERTISEMENT

IND vs SL: ಬೌಲಿಂಗ್‌ನಲ್ಲೂ ಮಿಂಚಿದ ಜಡೇಜ; ಭಾರತದ ಹಿಡಿತದಲ್ಲಿ ಪಂದ್ಯ

ಶ್ರಿಲಂಕಾ 174ಕ್ಕೆ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2022, 6:31 IST
Last Updated 6 ಮಾರ್ಚ್ 2022, 6:31 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ಮೊಹಾಲಿ:ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿಭಾರತ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿಶ್ರೀಲಂಕಾ ಕೇವಲ 174 ರನ್‌ ಗಳಿಗೆ ಆಲೌಟ್‌ ಆಗಿದೆ. ಇದರೊಂದಿಗೆ 400 ರನ್‌ಗಳ ಬೃಹತ್‌ ಮುನ್ನಡೆ ಪಡೆದಿರುವ ಭಾರತ,ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರವೀಂದ್ರ ಜಡೇಜ ಸಿಡಿಸಿದ ಅಮೋಘ ಶತಕದ (ಅಜೇಯ 175) ಬಲದಿಂದ 8 ವಿಕೆಟ್ ನಷ್ಟಕ್ಕೆ574 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಪ್ರವಾಸಿ ಪಡೆಗೆ, ಆಲ್‌ರೌಂಡರ್‌ ಜಡೇಜ ಬೌಲಿಂಗ್‌ನಲ್ಲೂ ಕಾಟ ಕೊಟ್ಟರು. 13 ಓವರ್‌ ಬೌಲಿಂಗ್‌ ಮಾಡಿ ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿ, ಭಾರತಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಆರ್.ಅಶ್ವಿನ್ ತಲಾ ಎರಡು ವಿಕೆಟ್‌ ಪಡೆದರೆ, ಮತ್ತೊಂದು ವಿಕೆಟ್‌ ಮೊಹಮ್ಮದ್ ಶಮಿ ಪಾಲಾಯಿತು.

ADVERTISEMENT

ಪಾಥುಮ್‌ ನಿಶಾಂಕ ಅರ್ಧಶತಕ (61) ಗಳಿಸಿದ್ದು ಬಿಟ್ಟರೆ, ಉಳಿದ ಯಾರಿಂದಲೂ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿ ಬರಲಿಲ್ಲ.

ಎರಡನೇ ಇನಿಂಗ್ಸ್‌ನಲ್ಲೂ ಆಘಾತ
ಭಾರಿ ಮುನ್ನಡೆ ಪಡೆದಿರುವ ಭಾರತ, ಪ್ರವಾಸಿ ತಂಡಕ್ಕೆ ಫಾಲೋಆನ್‌ ಹೇರಿದೆ. ಎರಡನೇ ಇನಿಂಗ್ಸ್‌ ಆರಂಭಿಸಿರುವದಿಮುತ್ ಕರುಣಾರತ್ನೆ ಪಡೆ ಆರಂಭಿಕ ಆಘಾತ ಅನುಭವಿಸಿದೆ.

ನಾಯಕನೊಂದಿಗೆ ಕ್ರೀಸ್‌ಗೆ ಬಂದ ಲಹಿರು ತಿರುಮನ್ನೆ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೈ ಚೆಲ್ಲಿದ್ದಾರೆ.ಸದ್ಯ ದಿಮುತ್ (8) ಮತ್ತು ಪಾಥುಮ್ ನಿಶಾಂಕ (1) ಕ್ರೀಸ್‌ನಲ್ಲಿದ್ದು, ತಂಡದ ಮೊತ್ತ 1 ವಿಕೆಟ್‌ಗೆ 10 ರನ್ ಆಗಿದೆ.

ಭಾರತದ ಮೊದಲ ಇನಿಂಗ್ಸ್‌ ಲೆಕ್ಕ ಚುಕ್ತಾ ಮಾಡಲು ಇನ್ನೂ 390 ರನ್ ಗಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.