ADVERTISEMENT

2ನೇ ಟಿ–20ಯಲ್ಲಿ ಭಾರತಕ್ಕೆ ಸೋಲು: ರೋಚಕತೆ ಪಡೆದ ಇಂದಿನ ಅಂತಿಮ ಪಂದ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 1:33 IST
Last Updated 29 ಜುಲೈ 2021, 1:33 IST
ಶ್ರೀಲಂಕಾ ಪದ ಔಟಾಗದೆ 40 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದ ಧನಂಜಯ ಡಿ ಸಿಲ್ವಾ.
ಶ್ರೀಲಂಕಾ ಪದ ಔಟಾಗದೆ 40 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದ ಧನಂಜಯ ಡಿ ಸಿಲ್ವಾ.   

ಕೊಲಂಬೊ: ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಟೀಮ್‌ ಇಂಡಿಯಾ ಸೋಲನುಭವಿಸಿದೆ.

ಭಾರತ ನೀಡಿದ್ದ 133 ರನ್ ಗುರಿಯನ್ನು ಶ್ರೀಲಂಕಾ ತಂಡ 6 ವಿಕೆಟ್‌ ಕಳೆದುಕೊಂಡು, ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಲುಪಿತು. ಶ್ರೀಲಂಕಾ ಪರ ಧನಂಜಯ ಡಿ ಸಿಲ್ವಾ ಔಟಾಗದೆ 40, ಮಿನೋದ್‌ ಭನುಕ 36 ರನ್‌ ಗಳಿಸಿದರು.

ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿತು. ಶ್ರೀಲಂಕಾದ ಸ್ಪಿನ್‌ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ರನ್‌ ಕಲೆ ಹಾಕಲು ಒದ್ದಾಟ ನಡೆಸಿದರು.

ADVERTISEMENT

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್‌ ಇಂಡಿಯಾ, ಎದುರಾಳಿಗೆ ತಂಡಕ್ಕೆ 133 ರನ್‌ಗಳ ಸಾಧಾರಣ ಗುರಿ ನೀಡಲಷ್ಟೇ ಶಕ್ತವಾಯಿತು. ಕೊರೊನಾ ವೈರಸ್‌ ಕಾರಣ ಪ್ರಮುಖ ಆಟಗಾರು ಭಾರತ ತಂಡದಲ್ಲಿ ಲಭ್ಯರಿಲ್ಲದ ಕಾರಣ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು.

ಭಾರತದ ಪರ ನಾಯಕ ಶಿಖರ್‌ ಧವನ್ 42 ಎಸೆತಗಳಲ್ಲಿ 40 ರನ್‌ಗಳ ಕೊಡುಗೆ ನೀಡಿದರು. ಯುವ ಪ್ರತಿಭೆಗಳಾದ ದೇದದತ್ ಪಡಿಕ್ಕಲ್ 29, ಋತುರಾಜ್ ಗಾಯಕ್ವಾಡ್‌ 21 ಮತ್ತು ನಿತೀಶ್‌ ರಾಣಾ 9 ರನ್‌ ಗಳಿಸಲಷ್ಟೇ ಶಕ್ತರಾದರು.

ಮೂರು ಟಿ-20 ಪಂದ್ಯಗಳಲ್ಲಿ 1-1 ರಿಂದ ಸಮಬಲ ಸಾಧಿಸಿರುವ ಉಭಯ ತಂಡಗಳು ಗುರುವಾರ, ಜುಲೈ 29ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಂಜೆ 8 ಗಂಟೆ 3ನೇ ಟಿ-20 ಪಂದ್ಯ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತ 132/5 (20)
ಶ್ರೀಲಂಕಾ 133/6 (19.4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.