ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕಾನ್ಪುರ: ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ (102; 68ಎ, 4x8, 6x7) ಅವರ ಬಿರುಸಿನ ಶತಕದ ನೆರವಿನಿಂದ ಭಾರತ ಎ ತಂಡವು ಆಸ್ಟ್ರೇಲಿಯಾ ಎ ವಿರುದ್ಧದ ಮೂರನೇ ಹಾಗೂ ಅಂತಿಮ ‘ಏಕದಿನ ಪಂದ್ಯ’ದಲ್ಲಿ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಎ ತಂಡವು 49.1 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಜ್ಯಾಕ್ ಎಡ್ವರ್ಡ್ಸ್ (89; 74ಎ) ಹಾಗೂ ಲಿಯಾಮ್ ಸ್ಕಾಟ್ (73, 64ಎ) ಅವರು ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಕೂಪರ್ ಕನೊಲಿ (64, 49ಎ) ಅರ್ಧಶತಕ ಗಳಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ಬಳಗಕ್ಕೆ ಅಭಿಷೇಕ್ ಶರ್ಮಾ (22, 25ಎ) ಹಾಗೂ ಪ್ರಭಸಿಮ್ರನ್ ಅವರು ಉತ್ತಮ ಆರಂಭ ಒದಗಿಸಿದರು. ಬಿರುಸಿನ ಆಟವಾಡಿದ ವಿಕೆಟ್‌ಕೀಪರ್ ಪ್ರಭಸಿಮ್ರನ್ ಅವರು ಶತಕ ಗಳಿಸಿ ಸಂಭ್ರಮಿಸಿದರು. ನಾಯಕ ಶ್ರೇಯಸ್ (62, 58ಎ) ಹಾಗೂ ರಿಯಾನ್ ಪರಾಗ್ (62, 55ಎ) ಅವರು ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ಮೆಟ್ಟಿನಿಂತರು.
ಆಸ್ಟ್ರೇಲಿಯಾ ಎ: 49.1 ಓವರ್‌ಗಳಲ್ಲಿ 317 (ಜ್ಯಾಕ್ ಎಡ್ವರ್ಡ್ಸ್ 89, ಲಿಯಾಮ್ ಸ್ಕಾಟ್ 73, ಕೂಪರ್ ಕನೊಲಿ 64, ಅರ್ಷದೀಪ್ ಸಿಂಗ್ 38ಕ್ಕೆ3, ಹರ್ಷಿತ್ ರಾಣಾ 61ಕ್ಕೆ3)
ಭಾರತ ಎ: 46 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 322 (ಪ್ರಭಸಿಮ್ರನ್ ಸಿಂಗ್ 102, ಶ್ರೇಯಸ್ ಅಯ್ಯರ್ 62, ರಿಯಾನ್ ಪರಾಗ್ 62, ಟಾಡ್ ಮುರ್ಫಿ 42ಕ್ಕೆ4, ತನ್ವೀರ್ ಸಂಘಾ 72ಕ್ಕೆ4)
ಫಲಿತಾಂಶ: ಭಾರತಕ್ಕೆ 2 ವಿಕೆಟ್ ಜಯ, 2–1ರಿಂದ ಸರಣಿ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.