ADVERTISEMENT

ಭಾರತ ‘ಎ’ ಕ್ಲೀನ್‌ಸ್ವೀಪ್ ಸಾಧನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:39 IST
Last Updated 28 ಸೆಪ್ಟೆಂಬರ್ 2022, 5:39 IST

ಚೆನ್ನೈ (ಪಿಟಿಐ): ರಾಜ್ ಅಂಗದ್‌ ಬಾವಾ (11ಕ್ಕೆ4) ಅವರ ಪ್ರಭಾವಿ ಬೌಲಿಂಗ್‌ ಮತ್ತು ಶಾರ್ದೂಲ್‌ ಠಾಕೂರ್ (51 ರನ್‌, 33 ಎ) ಗಳಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಭಾರತ ‘ಎ’ ತಂಡ, ನ್ಯೂಜಿಲೆಂಡ್‌ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 106 ರನ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 49.3 ಓವರ್‌ಗಳಲ್ಲಿ 284 ರನ್‌ಗಳಿಗೆ ಆಲೌಟಾಯಿತು. ಶಾರ್ದೂಲ್‌ ಅಲ್ಲದೆ ಸಂಜು ಸ್ಯಾಮ್ಸನ್‌ (54 ರನ್, 68 ಎ.) ಮತ್ತು ತಿಲಕ್‌ ವರ್ಮಾ (50 ರನ್, 62 ಎ.) ಅವರೂ ಅರ್ಧಶತಕ ಗಳಿಸಿದರು.

ಭಾರತದ ಬೌಲರ್‌ಗಳ ಶಿಸ್ತಿನ ದಾಳಿಗೆ ನಲುಗಿದ ನ್ಯೂಜಿಲೆಂಡ್‌ ‘ಎ’ 38.3 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟಾಯಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’ 49.3 ಓವರ್‌ಗಳಲ್ಲಿ 284 (ಅಭಿಮನ್ಯು ಈಶ್ವರನ್‌ 39, ಸಂಜು ಸ್ಯಾಮ್ಸನ್‌ 54, ತಿಲಕ್‌ ವರ್ಮಾ 50, ಋಷಿ ಧವನ್ 34, ಶಾರ್ದೂಲ್‌ ಠಾಕೂರ್‌ 51, ಜೇಕಬ್‌ ಡಫಿ 45ಕ್ಕೆ 2, ಮೈಕಲ್‌ ರಿಪನ್‌ 43ಕ್ಕೆ 2)

ನ್ಯೂಜಿಲೆಂಡ್‌ ‘ಎ’ 38.3 ಓವರ್‌ಗಳಲ್ಲಿ 178 (ಡೇನ್‌ ಕ್ಲೀವರ್‌ 83, ರಾಜ್‌ ಬಾವಾ 11ಕ್ಕೆ 4, ಕುಲದೀಪ್‌ ಯಾದವ್‌ 29ಕ್ಕೆ 2, ರಾಹುಲ್‌ ಚಾಹರ್‌ 39ಕ್ಕೆ 2) ಫಲಿತಾಂಶ: ಭಾರತ ‘ಎ’ ತಂಡಕ್ಕೆ 106 ರನ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.