ಲಖನೌ: ಆಸ್ಟ್ರೇಲಿಯಾ ಎ ತಂಡವು ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡಕ್ಕೆ ಗುರುವಾರ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ (ಗಾಯಗೊಂಡು ನಿವೃತ್ತಿ 74;92ಎ, 4x9) ಆಸರೆಯಾದರು. ಎರಡನೇ ‘ಟೆಸ್ಟ್’ನ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಹಿನ್ನೆಡೆ ಅನುಭವಿಸಿದ್ದ ಆತಿಥೇಯ ತಂಡಕ್ಕೆ ಅವರು ಗೆಲುವಿನ ಆಸೆ ಚಿಗುರಿಸಿದರು.
ಗೆಲುವಿಗೆ 412 ರನ್‌ಗಳ ಗುರಿ ಪಡೆದಿರುವ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 41 ಓವರ್‌ಗಳಲ್ಲಿ 2 ವಿಕೆಟ್‌ಗೆ 169 ರನ್ ಗಳಿಸಿದೆ. ಗೆಲುವಿಗೆ ಇನ್ನೂ 243 ರನ್ ಬೇಕಿದೆ. ಆದರೆ, ಪಂದ್ಯದ ವೇಳೆ ರಾಹುಲ್ ಗಾಯಗೊಂಡು ನಿವೃತ್ತರಾದರು. ಸಾಯಿ ಸುದರ್ಶನ್ (ಔಟಾಗದೇ 44) ಮತ್ತು ಮಾನವ್ ಸುತಾರ್ (ಔಟಾಗದೇ 1) ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 226 ರನ್‌ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿತು. ಬುಧವಾರ 3 ವಿಕೆಟ್‌ಗೆ 16 ರನ್ ಗಳಿಸಿದ್ದ ತಂಡವು ನಾಯಕ ನೇಥನ್ ಮೆಕ್‌ಸ್ವೀನಿ (ಔಟಾಗದೇ 85;149ಎ) ಏಕಾಂಗಿ ಹೋರಾಟದ ಬಲದಿಂದ 46.5 ಓವರ್‌ಗಳಲ್ಲಿ 185 ರನ್ ಗಳಿಸಿತು. ಭಾರತದ ಪರ ಗುರ್ನೂರ್ ಬ್ರಾರ್ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 98 ಓವರ್‌ಗಳಲ್ಲಿ 6 ಕ್ಕೆ 532 ಡಿಕ್ಲೇರ್ಡ್.
ಭಾರತ ಎ: 52.5 ಓವರುಗಳಲ್ಲಿ 194.
ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 46.5 ಓವರ್‌ಗಳಲ್ಲಿ 185 (ನೇಥನ್ ಮೆಕ್‌ಸ್ವೀನಿ ಔಟಾಗದೇ 85, ಜೋಷ್ ಫಿಲಿಪ್ 50; ಗುರ್ನೂರ್ ಬ್ರಾರ್ 42ಕ್ಕೆ 3, ಮಾನವ್ ಸುತಾರ್ 50ಕ್ಕೆ 3, ಮೊಹಮ್ಮದ್ ಸಿರಾಜ್ 20ಕ್ಕೆ 2, ಯಶ್ ಠಾಕೂರ್ 29ಕ್ಕೆ 2).
ಭಾರತ ಎ: 41 ಓವರ್‌ಗಳಲ್ಲಿ 2 ವಿಕೆಟ್‌ಗೆ 169 (ನಾರಾಯಣ ಜಗದೀಶನ್ 36, ಕೆ.ಎಲ್.ರಾಹುಲ್ 74 (ಗಾಯಾಳಾಗಿ ನಿವೃತ್ತಿ), ಸಾಯಿ ಸುದರ್ಶನ್ ಔಟಾಗದೇ 44).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.