ಪರ್ತ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಎರಡು ಬಾರಿ ಮಳೆಯಿಂದ ಅಡಚಣೆ ಉಂಟಾಗಿದ್ದು, ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಒಬ್ಬ ಬೌಲರ್ ಗರಿಷ್ಠ 7 ಓವರ್ ಬೌಲಿಂಗ್ ಮಾಡಬಹುದಾಗಿದೆ.
ಟಾಸ್ ಸೋತು ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದ್ದು, ಪಂದ್ಯ ನಿಂತಾಗ 11.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತ್ತು. ರೋಹಿತ್ ಶರ್ಮಾ(10), ವಿರಾಟ್ ಕೊಹ್ಲಿ(0), ನಾಯಕ ಶುಭಮನ್ ಗಿಲ್ ಬೇಗ ನಿರ್ಗಮಿಸಿದರು.
8 ಎಸೆತ ಎದುರಿಸಿದ ಕೊಹ್ಲಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ಸೊನ್ನೆಗೆ ನಿರ್ಗಮಿಸಿದರೆ, ರೋಹಿತ್ ಶರ್ಮಾ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ ಮತ್ತು ರೋಹಿತ್ ತಮ್ಮ ಮುಂದಿನ ವೃತ್ತಿಜೀವನದ ಭವಿಷ್ಯದ ದೃಷ್ಟಿಯಿಂದ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ.
ಇದೀಗ, ಮಳೆ ನಿಂತು ಪಂದ್ಯ ಮತ್ತೆ ಆರಂಭವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಭಾರತ ತಂಡ 16 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.