ADVERTISEMENT

ಭಾರತ–ಆಸ್ಟ್ರೇಲಿಯಾ ಟಿ20 ಪಂದ್ಯ: ಟಿಕೆಟ್‌ಗಾಗಿ ಕಾದು..ಕಾದು...

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 17:15 IST
Last Updated 19 ಫೆಬ್ರುವರಿ 2019, 17:15 IST
   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 27ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟ್ವೆಂಟಿ 20 ಪಂದ್ಯಕ್ಕಾಗಿ ಮಂಗಳವಾರ ಟಿಕೆಟ್ ಮಾರಾಟ ಆರಂಭವಾಗಿದೆ.

ಟಿಕೆಟ್ ಖರೀದಿಗಾಗಿ ಅಭಿಮಾನಿಗಳು ಬೆಳಗಿನ ಜಾವದಿಂದಲೇ ಕೌಂಟರ್ ಮುಂದೆ ಸಾಲುಗಟ್ಟಿದ್ದರು. ಕ್ರೀಡಾಂಗಣದಕೌಂಟರ್‌ಗಳಲ್ಲಿ ₹ 750 ರಿಂದ ₹10 ಸಾವಿರದವರೆಗಿನ ವಿವಿಧ ಸ್ಟ್ಯಾಂಡ್‌ಗಳ ಟಿಕೆಟ್‌ಗಳು ಲಭ್ಯವಿದೆ.

ಈ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಣೆ ನೀಡಿದೆ. ₹ 750ರ ಟಿಕೆಟ್‌ಗಳನ್ನು ಒಬ್ಬರಿಗೆ ಒಂದು ಮತ್ತು ಉಳಿದ ಶ್ರೇಣಿಯ ಟಿಕೆಟ್‌ಗಳನ್ನು ಒಬ್ಬರಿಗೆ ಎರಡು ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

ADVERTISEMENT

ಆನ್‌ಲೈನ್‌ನಲ್ಲಿಯೂ ಟಿಕೆಟ್‌ ಮಾರಾಟ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.