ADVERTISEMENT

ಭಾರತ ಯಾವುದೇ ತಂಡದ ಮೇಲೆ ಒತ್ತಡ ಹೇರಬಲ್ಲದು: ಹರ್ಮನ್‌ಪ್ರೀತ್‌

ಪಿಟಿಐ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
ಹರ್ಮನ್‌ಪ್ರೀತ್‌ ಕೌರ್‌
ಹರ್ಮನ್‌ಪ್ರೀತ್‌ ಕೌರ್‌   

ಸಿಡ್ನಿ: ‘ಸರಿಯಾದ ಮನಃಸ್ಥಿತಿಯಿಂದ ಕಣಕ್ಕಿಳಿದರೆ, ಟ್ವೆಂಟಿ–20 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡ ಯಾವುದೇ ತಂಡದ ಮೇಲೆ ಒತ್ತಡ ಹೇರಬಲ್ಲದು’ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದರು.‌

ಸಕಾರಾತ್ಮಕ ಮನೋಭಾವ ತಂಡದ ದೊಡ್ಡ ಶಕ್ತಿ ಎಂದ ಅವರು, ‘ಶುಕ್ರವಾರ ಇಲ್ಲಿ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಕಾತರದಿಂದ ಕಾಯುತ್ತಿದ್ದೇವೆ’ ಎಂದು ಹೇಳಿದರು.‌

ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಿರುವ ಕಾರಣ ಹರ್ಮನ್‌ಪ್ರೀತ್‌ ಅವರಿಗೆ ಈ ನಗರ ಪರಿಚಿತ.ಸಿಡ್ನಿ ಕ್ರಿಕೆಟ್‌ ಮೈದಾನದ ನಿಧಾನಗತಿಯ ಟ್ರ್ಯಾಕ್‌ ಮತ್ತು ಹೆಚ್ಚಿನ ಸಂಖ್ಯೆಯ ಭಾರತೀಯ ಮೂಲದ ಪ್ರೇಕ್ಷಕರ ಬೆಂಬಲ ತಂಡಕ್ಕೆ ಉತ್ಸಾಹ ತುಂಬಬಲ್ಲದು ಎಂದು ಅವರು ಹೇಳಿದರು.

ADVERTISEMENT

ಮಾರ್ಚ್‌ 8ರಂದು ಈ ಟೂರ್ನಿಯ ಫೈನಲ್‌ ನಡೆಯಲಿದೆ.

ಆಸ್ಟ್ರೇಲಿಯಾದ ಯುವ ವೇಗಿ ಅನ್ನಾಬೆಲ್‌ ಸದರ್‌ಲ್ಯಾಂಡ್‌ ಕೆಲವೇ ದಿನಗಳ ಹಿಂದೆ ಆಸ್ಟ್ರೇಲಿಯಾ ಟಿ–20 ತಂಡಕ್ಕೆ ಪದಾರ್ಪಣೆ ಮಾಡಿದ್ದು, ಅತಿ ದೊಡ್ಡ ಮಹಿಳಾ ಕ್ರಿಕೆಟ್‌ ಮೇಳದಲ್ಲಿ ಆಡಲು ಉತ್ಸುಕರಾಗಿದ್ದಾರೆ. 18 ವರ್ಷದ ಅನ್ನಾಬೆಲ್‌, ಕ್ರಿಕೆಟ್‌ ಆಸ್ಟ್ರೇಲಿಯಾದ ಮಾಜಿ ಸಿಇಒ ಜೇಮ್ಸ್‌ ಸದರ್‌ಲ್ಯಾಂಡ್‌ ಅವರ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.