ADVERTISEMENT

IND vs ENG: ನಿಧಾನಗತಿಯ ಬೌಲಿಂಗ್‌, ಭಾರತ ತಂಡಕ್ಕೆ ದಂಡ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 14:17 IST
Last Updated 21 ಮಾರ್ಚ್ 2021, 14:17 IST
ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಶನಿವಾರ ಮುಕ್ತಾಯಗೊಂಡ ಟಿ20 ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಮಾಡಿ ಮುಗಿಸದ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯ ಶೇಕಡಾ 40 ಭಾಗವನ್ನು ದಂಡದ ರೂಪದಲ್ಲಿ ನೀಡಬೇಕಾಗಿದೆ.

ನಿಗದಿ ಮಾಡಿದ ಅವಧಿ ಮುಕ್ತಾಯಗೊಂಡಾಗ ಭಾರತ ತಂಡ ಇನ್ನೂ ಎರಡು ಓವರ್‌ ಮಾಡುವುದು ಬಾಕಿ ಇತ್ತು ಎಂದು ಪಂದ್ಯದ ಅಂಪೈರ್‌ಗಳಾಗಿದ್ದ ಅನಿಲ್ ಚೌಧರಿ, ನಿತಿನ್ ಮೆನೋನ್ ಮತ್ತು ಕೆ.ಎನ್‌.ಅನಂತಪದ್ಮನಾಭನ್ ವರದಿ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ರೆಫರಿ ಜಾವಗಲ್ ಶ್ರೀನಾಥ್ ಮುಂದಾದರು.

ಆಟಗಾರರು ಮತ್ತು ನೆರವು ಸಿಬ್ಬಂದಿಯ ಕರ್ತವ್ಯಗಳಿಗೆ ಸಂಬಂಧಿಸಿದ ಐಸಿಸಿಯ ನಿಯಮ 2.22ರ ಅಡಿಯಲ್ಲಿ ದಂಡ ವಿಧಿಸಲಾಗಿದೆ. ತಪ್ಪನ್ನು ನಾಯಕ ಕೊಹ್ಲಿ ಒಪ್ಪಿಕೊಂಡಿದ್ದು ಸಮರ್ಪಕ ಕಾರಣವನ್ನೂ ನೀಡಿದ್ದಾರೆ. ಹೀಗಾಗಿ ಈ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ರೆಫರಿ ತಿಳಿಸಿದ್ದಾರೆ. ‌‌

‍ಪಂದ್ಯದಲ್ಲಿ ಭಾರತ 36 ರನ್‌ಗಳಿಂದ ಜಯ ಗಳಿಸಿ ಐದು ಪಂದ್ಯಗಳ ಸರಣಿಯನ್ನು 3–2ರಲ್ಲಿ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.