ADVERTISEMENT

ಭಾರತಕ್ಕೆ ವಿಶ್ವಕಪ್‌ ಗೆಲ್ಲುವ ಅವಕಾಶವಿದೆ: ವೆಂಗ್‌ಸರ್ಕಾರ್‌

ಪಿಟಿಐ
Published 6 ಮೇ 2019, 18:16 IST
Last Updated 6 ಮೇ 2019, 18:16 IST
 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿಲೀಪ್‌ ವೆಂಗ್‌ಸರ್ಕಾರ್‌, ಸುನಿಲ್‌ ಗಾವಸ್ಕರ್ ಹಾಗೂ ಸಚಿನ್ ತೆಂಡೂಲ್ಕರ್
 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿಲೀಪ್‌ ವೆಂಗ್‌ಸರ್ಕಾರ್‌, ಸುನಿಲ್‌ ಗಾವಸ್ಕರ್ ಹಾಗೂ ಸಚಿನ್ ತೆಂಡೂಲ್ಕರ್   

ಮುಂಬೈ: ವಿರಾಟ್‌ ಕೊಹ್ಲಿ ಪಡೆಗೆ ಈ ಬಾರಿಯ ವಿಶ್ವಕಪ್‌ ಎತ್ತಿಹಿಡಿಯುವ ಅದ್ಭುತ ಅವಕಾಶವಿದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಲೀಪ್‌ ವೆಂಗ್‌ಸರ್ಕಾರ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಕ್ರಿಕೆಟ್‌ ಸಂಸ್ಥೆಯ ಸಂಘಟಕರುಮುಂಬೈ ಟ್ವೆಂಟಿ–20 ಲೀಗ್‌ನ ಎರಡನೇ ಆವೃತ್ತಿಯ ಆರಂಭವನ್ನು ಘೋಷಿಸಿದರು. ಲೀಗ್‌ನ ಮಾರ್ಗದರ್ಶಿ ಆಗಿರುವ ವೆಂಗ್‌ಸರ್ಕಾರ್‌ ಈ ಸಂದರ್ಭದಲ್ಲಿ ಮಾತನಾಡಿದರು.

ಭಾರತ ಕನಿಷ್ಠ ಸೆಮಿಫೈನಲ್‌ಗಾದರೂ ಖಂಡಿತ ತಲುಪಲಿದೆ. ತಂಡ ಫೈನಲ್‌ವರೆಗೆ ಸಾಗಲಿದೆ ಎಂಬುದನ್ನು ನಿಖರವಾಗಿ ಹೇಳಲಾಗದು. ಕೊಹ್ಲಿ ಪಡೆ ಭಾರೀ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ಆಟಗಾರರು ಉತ್ತಮ ಲಯದಲ್ಲಿದ್ದಾರೆ ಎಂದು ವೆಂಗ್‌ಸರ್ಕಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಇಂಗ್ಲೆಂಡ್‌ನಲ್ಲಿ ಮೇ 30ರಿಂದ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಭಾರತ ಜೂ.5ರಂದು ದ.ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.