ADVERTISEMENT

Hong Kong Sixes: ಮಳೆ ಬಾಧಿತ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ

ಪಿಟಿಐ
Published 7 ನವೆಂಬರ್ 2025, 9:30 IST
Last Updated 7 ನವೆಂಬರ್ 2025, 9:30 IST
   

ಮೊಂಗ್ ಕೋಕ್ (ಹಾಂಗ್‌ಕಾಂಗ್‌): ಹಾಂಗ್‌ಕಾಂಗ್‌ ಸಿಕ್ಸಸ್‌ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಭಾರತವು ಡಿಎಲ್‌ಎಸ್‌ ನಿಯಮದ ಪ್ರಕಾರ 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಹಾಂಗ್‌ಕಾಂಗ್‌ ಮಿಷನ್ ರೋಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡವು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು ರಾಬಿನ್‌ ಉತ್ತಪ್ಪ 28 ರನ್‌( 11 ಎಸೆತ), ಭರತ್‌ ಚಿಪ್ಲಿ 24 ರನ್‌( 13 ಎಸೆತ) ಹಾಗೂ ದಿನೇಶ್‌ ಕಾರ್ತಿಕ್‌ 17 ರನ್‌( 6 ಎಸೆತ) ಅವರ ಉತ್ತಮ ಆಟದ ನೆರವಿನಿಂದ 6 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 86 ರನ್‌ ಗಳಿಸಿತ್ತು.

ADVERTISEMENT

87 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡವು 3 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದ ಕಾರಣ, ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತವು 2 ರನ್‌ಗಳಿಂದ ಗೆಲುವು ಸಾಧಿಸಿತು.

ಹಾಂಗ್‌ಕಾಂಗ್‌ ಸಿಕ್ಸಸ್‌ ಟೂರ್ನಿಯು 6 ಓವರ್‌ಗಳ ಟೂರ್ನಿಯಾಗಿದ್ದು, ಒಂದು ತಂಡದಲ್ಲಿ ಕೇವಲ 6 ಆಟಗಾರರು ಮಾತ್ರ ಕಣಕ್ಕಿಳಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.