ಪದ್ಮಾಕರ್ ಶಿವಾಳ್ಕರ್, ಟೀಮ್ ಇಂಡಿಯಾ ಆಟಗಾರರು
ದುಬೈ: ಭಾರತದ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದ ಸ್ಪಿನ್ ದಂತಕಥೆ ಪದ್ಮಾಕರ್ ಶಿವಾಳ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಮಂಗಳವಾರ) ದುಬೈಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದಾರೆ.
ಭಾರತದ ಸ್ಪಿನ್ ದಂತಕಥೆ ಪದ್ಮಾಕರ್ ಶಿವಾಳ್ಕರ್ ಸೋಮವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು.
ಬಿಷನ್ ಸಿಂಗ್ ಬೇಡಿ ಕಾಲಘಟ್ಟದಲ್ಲಿ ಆಡಿದ್ದರಿಂದ ಶಿವಾಳ್ಕರ್ ಅವರಿಗೆ ಎಂದೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. 1961-62ರಿಂದ 1987-88ರ ಅವಧಿಯಲ್ಲಿ ಆಡಿದ್ದರು. 124 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 589 ವಿಕೆಟ್‌ಗಳನ್ನು ಕಬಳಿಸಿದ್ದರು.
2017ರಲ್ಲಿ ಶಿವಾಳ್ಕರ್ ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಿತ್ತು.
ಮುಂಬೈ ತಂಡವು 22 ವರ್ಷಗಳಲ್ಲಿ 20 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿತ್ತು. ಅಷ್ಟು ಬಾರಿಯೂ ಶಿವಾಳ್ಕರ್ ತಂಡದಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.