ADVERTISEMENT

ಏಕದಿನ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ಏರಿದ ಭಾರತ

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ

ಪಿಟಿಐ
Published 15 ಸೆಪ್ಟೆಂಬರ್ 2023, 12:51 IST
Last Updated 15 ಸೆಪ್ಟೆಂಬರ್ 2023, 12:51 IST
<div class="paragraphs"><p> ಭಾರತ,</p></div>

ಭಾರತ,

   

ದುಬೈ (ಪಿಟಿಐ): ಏಷ್ಯಾ ಕಪ್‌ ಟೂರ್ನಿ ಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತ ತಂಡ, ಏಕದಿನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಇನ್ನೊಂದೆಡೆ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ಅಗ್ರಸ್ಥಾನ ಕಳೆದುಕೊಂಡಿದೆ.

ಸೂಪರ್‌ಫೋರ್‌ ಹಂತದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಬಾಬರ್‌ ಆಜಂ ನೇತೃತ್ವದ ತಂಡ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಸರಿದಿದೆ. ವಾರದ ಮಧ್ಯ ಪ್ರಕಟವಾದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಪಾಕ್ ತಂಡ 115 ಪಾಯಿಂಟ್ಸ್ ಕಲೆಹಾಕಿದೆ.

ADVERTISEMENT

ಮುಂದಿನ ತಿಂಗಳ ವಿಶ್ವಕಪ್‌ ಸಮೀಪಿಸುತ್ತಿರುವಂತೆ, 116 ಪಾಯಿಂಟ್ಸ್‌ ಗಳಿಸಿರುವ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 118 ಪಾಯಿಂಟ್ಸ್‌ ಹೊಂದಿದ್ದು ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಬೆನ್ನುಬೆನ್ನಿಗೆ ಗಳಿಸಿದ ಜಯಗಳಿಂದ ಬಡ್ತಿಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.