
ತೆಂಬಾ ಬವುಮಾ
ಗುವಾಹಟಿ: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ ಸ್ವೀಪ್ ಮಾಡಿದೆ. ಆ ಮೂಲಕ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು. ಇದಕ್ಕೂ ಮೊದಲು 2000ರಲ್ಲಿ ಹನ್ಸಿ ಕ್ರಾಂಜೆ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿತ್ತು.
ಎರಡನೇ ಪಂದ್ಯದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ, ‘ಪ್ರತಿ ಬಾರಿಯೂ ಭಾರತಕ್ಕೆ ಬಂದು ಸರಣಿ ಸ್ವೀಪ್ ಮಾಡಲು ಸಾಧ್ಯವಿಲ್ಲ. ಇದು ಕಳೆದ ಎರಡು ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದ ನನಗೆ ಮತ್ತು ನಮ್ಮ ತಂಡಕ್ಕೆ ತುಂಬಾ ದೊಡ್ಡ ಗೆಲುವಾಗಿದೆ’ ಎಂದರು.
ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ನರ್‌ಗಳಾದ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಅವರನ್ನು ಬವುಮಾ ಶ್ಲಾಘಿಸಿದರು.
‘ಸೈಮನ್ ಅವರು ಇದಕ್ಕೂ ಮೊದಲು 2015ರಲ್ಲಿ ಭಾರತದಲ್ಲಿ ಆಡಿದ ಅನುಭವ ಹೊಂದಿದ್ದರು. ಅವರಿಗೆ ಕೇಶವ್ ಮಹಾರಾಜ್ ಉತ್ತಮ ಸಾಥ್ ನೀಡಿದರು. ಈ ಸರಣಿಯಲ್ಲಿ ಸೈಮನ್ ನಮ್ಮ ತಂಡದ ಅತ್ಯುತ್ತಮ ಆಟಗಾರ’ ಎಂದು ತೆಂಬಾ ಶ್ಲಾಘಿಸಿದರು.
ಸ್ಪಿನ್ನರ್ ಹಾರ್ಮರ್ ಅವರು 2 ಪಂದ್ಯಗಳ ಸರಣಿಯಲ್ಲಿ ಬರೋಬ್ಬರಿ 17 ವಿಕೆಟ್ ಪಡೆದುಕೊಂಡರು. ಹಾಗಾಗಿ ಅವರಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.