
ನವದೆಹಲಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಸೋಲಿಗೆ ಭಾರತ ತಂಡದ ಹಂಗಾಮಿ ನಾಯಕ ರಿಷಭ್ ಪಂತ್ ಅವರು ಕ್ಷಮೆ ಕೇಳಿದ್ದಾರೆ.
‘ಮತ್ತೆ ಒಗ್ಗೂಡಿ, ಮುಂದೆ ಸಾಗುವತ್ತ ಚಿತ್ತ ಹರಿಸುತ್ತೇವೆ’ ಎಂದು ಪಂತ್ ಹೇಳಿದ್ದಾರೆ.
‘ಕಳೆದೆರಡು ವಾರಗಳಲ್ಲಿ ನಾವು ಒಳ್ಳೆಯ ಕ್ರಿಕೆಟ್ ಆಡಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ. ತಂಡವಾಗಿ ಮತ್ತು ವೈಯಕ್ತಿಕವಾಗಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ಆಡಿ ಲಕ್ಷಾಂತರ ಭಾರತೀಯರನ್ನು ಸಂತುಷ್ಟಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ಈ ಬಾರಿ ನಿರೀಕ್ಷೆಗಳಿಗೆ ತಕ್ಕಂತಹ ಫಲಿತಾಂಶ ನೀಡಲು ನಮ್ಮಿಂದ ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈ ತಂಡದಲ್ಲಿ ಪುಟಿದೇಳುವ ಸಾಮರ್ಥ್ಯ ಇದೆ. ಮತ್ತೆ ಎಲ್ಲ ಶಕ್ತಿ ಒಗ್ಗೂಡಿಸಿಕೊಂಡು ಕಣಕ್ಕೆ ಮರಳುತ್ತೇವೆ. ಕಠಿಣ ಪರಿಶ್ರಮದೊಂದಿಗೆ ಗೆಲುವಿನತ್ತ ಸಾಗುತ್ತೇವೆ’ ಎಂದು ಪಂತ್ ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಶುಭಮನ್ ಗಿಲ್ ಗಾಯಗೊಂಡಿದ್ದರಿಂದ ಎರಡನೇ ಟೆಸ್ಟ್‌ನಲ್ಲಿ ಪಂತ್ ಅವರು ನಾಯಕತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.