ADVERTISEMENT

ಅಕ್ಟೋಬರ್‌ನಲ್ಲಿ ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ, ವೇಳಾಪಟ್ಟಿ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2025, 10:09 IST
Last Updated 22 ಮಾರ್ಚ್ 2025, 10:09 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ಪ್ರಜಾವಾಣಿ ಚಿತ್ರ)

ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ಭಾರತದ ಆತಿಥ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ADVERTISEMENT

ಈ ಸಂಬಂಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಅಕ್ಟೋಬರ್ 2ರಿಂದ 6ರವರೆಗೆ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಮತ್ತು ಅ. 10ರಿಂದ 14ರವರೆಗೆ ಕೋಲ್ಕತ್ತದಲ್ಲಿ ದ್ವಿತೀಯ ಟೆಸ್ಟ್ ನಡೆಯಲಿದೆ.

ಐಪಿಎಲ್ 2025ರ ಬಳಿಕ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಭಾರತ ಪ್ರಯಾಣ ಬೆಳೆಸಲಿದೆ. ಅದಾದ ಬಳಿಕ ವರ್ಷಾಂತ್ಯದ ವೇಳೆಗೆ ವಿಂಡೀಸ್ ಸರಣಿ ಆಯೋಜನೆಯಾಗಲಿದೆ.

2025-27ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌‌ನಲ್ಲಿ (ಡಬ್ಲ್ಯುಟಿಸಿ) ಭಾರತಕ್ಕೆ ಪ್ರತಿ ಪಂದ್ಯವೂ ಅತ್ಯಂತ ಮಹತ್ವದೆನಿಸಿಕೊಂಡಿದೆ.

ಕಳೆದೆರಡು ಸಾಲಿನಲ್ಲಿ ಭಾರತ ಫೈನಲ್‌ಗೆ ತಲುಪಿದ್ದರೂ ಈ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸುವಲ್ಲಿ ವಿಫಲವಾಗಿತ್ತು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಾದ ಸೋಲು ಹಿನ್ನಡೆಯಾಗಿ ಪರಿಣಮಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.