ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಕ್ವಾಲಾಲಂಪುರ: ಭಾರತ ತಂಡ, ಮಹಿಳೆಯರ ಐಸಿಸಿ 19 ವರ್ಷದೊಳಗಿನ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಕಳಂಕರಹಿತ ಪ್ರದರ್ಶನವನ್ನು ಮುಂದುವರಿಸುವ ತವಕದಲ್ಲಿದೆ.
ಟೂರ್ನಿಯ ತನ್ನ ಎಲ್ಲ ಪಂದ್ಯಗಳಲ್ಲಿ ಭಾರತದ ಯುವ ಆಟಗಾರ್ತಿಯರು ಸಲೀಸಾಗಿ ಜಯ ಸಾಧಿಸಿದ್ದಾರೆ. ಮಲೇಷ್ಯಾ ಎದುರು 10 ವಿಕೆಟ್ ಗೆಲುವು, ಲಂಕಾ ಎದುರು 60 ರನ್ ಜಯ, ಸೂಪರ್ ಸಿಕ್ಸ್ ಹಂತದಲ್ಲಿ ಬಾಂಗ್ಲಾ ಎದುರು ಎಂಟು ವಿಕೆಟ್ ಜಯ, ಸ್ಕಾಟ್ಲೆಂಡ್ ಎದುರು 150 ರನ್‌ಗಳ ಜಯ– ಇದು ಕನ್ನಡತಿ ನಿಕಿ ಪ್ರಸಾದ್ ನೇತೃತ್ಬದ ಭಾರತ ತಂಡದ ಪಾರಮ್ಯ ತೋರಿಸಿದೆ.
ಆರಂಭ ಆಟಗಾರ್ತಿ ಗೊಂಗಡಿ ತ್ರಿಷಾ (76.66 ಸರಾಸರಿಯಲ್ಲಿ 230) ಉತ್ತಮ ಲಯದಲ್ಲಿದ್ದಾರೆ. ಅವರ ಜೊತೆಗಾತಿ– ವಿಕೆಟ್ ಕೀಪರ್ ಜಿ.ಕಮಲಿನಿ ಕೂಡ ಒಳ್ಳೆಯ ಕೊಡುಗೆ ನೀಡಿದ್ದಾರೆ. ಬೌಲರ್‌ಗಳು ಸಾಂಘಿಕ ಪ್ರಯತ್ನ ಮೆರೆದಿದ್ದಾರೆ. ವೈಷ್ಣವಿ ಮತ್ತು ಆಯುಷಿ ಶುಕ್ಲಾ ಇವರಲ್ಲಿ ಪ್ರಮುಖರು.
ಇಂಗ್ಲೆಂಡ್ ತನ್ನ ಸೂಪರ್ ಸಿಕ್ಸ್ ಪಂದ್ಯಗಳಲ್ಲಿ ಎರಡು ಗೆದ್ದು, ಎರಡು ಸೋತಿದೆ. ಹೀಗಾಗಿ ತಂಡದ ಮುಂದೆ ಉತ್ಸಾಹಭರಿತ ಪ್ರದರ್ಶನ ನೀಡಬೇಕಾದ ದೊಡ್ಡ ಸವಾಲು ಇದೆ.
ಪಂದ್ಯ ಆರಂಭ: ಮಧ್ಯಾಹ್ನ 12.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.