ADVERTISEMENT

ಏಕದಿನ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ರನ್‌ ರೋಚಕ ಜಯ 

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 16:41 IST
Last Updated 5 ಮಾರ್ಚ್ 2019, 16:41 IST
–ಎಎಫ್‌ಪಿ ಚಿತ್ರ
–ಎಎಫ್‌ಪಿ ಚಿತ್ರ   

ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ.

ಭಾರತ ನೀಡಿದ್ದ 251 ರನ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 242 ರನ್‌ ಗಳಿಸಿ ಆಲೌಟ್‌ ಆಗಿದೆ. ಈ ಮೂಲಕ ಭಾರತ 8 ರನ್‌ಗಳಿಂದ ಜಯ ಸಾಧಿಸಿತು.

ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಾಯಕ ವಿರಾಟ್‌ ಕೊಹ್ಲಿ ಶತಕದ ಬಲದಿಂದ (116), ವಿಜಯ್‌ ಶಂಕರ್‌ (46) ರನ್‌ ನೇರವಿನಿಂದ 48.2 ಓವರ್‌ಗಳಲ್ಲಿ 250 ರನ್‌ ಗಳಿಸಿ ಆಲೌಟ್‌ ಆಗಿತ್ತು.

ADVERTISEMENT

ಆಸ್ಟ್ರೇಲಿಯಾ ಪರ: ಆ್ಯರನ್ ಫಿಂಚ್‌ 37, ಉಸ್ಮಾನ್ ಖ್ವಾಜಾ 38, ಶಾನ್‌ ಮಾರ್ಶ್‌ 16, ಪೀಟರ್‌ ಹ್ಯಾಂಡ್ಸ್‌ಕಂಬ್‌ 48, ಗ್ಲೇನ್‌ ಮ್ಯಾಕ್ಸ್‌ವೇಲ್‌ 4, ಮಾರ್ಕಸ್ ಸ್ಟೊಯಿನಿಸ್‌ 52, ಅಲೆಕ್ಸ್ ಕ್ಯಾರಿ 22,ನೇಥನ್ ಕಾಲ್ಟರ್‌ನೈಲ್‌ 4, ಪ್ಯಾಟ್‌ ಕಮಿನ್ಸ್‌ 00, ನೇಥನ್ ಲಯನ್‌ 6, ಆ್ಯಡಂ ಜಂಪಾ 02 ರನ್‌ ಗಳಿಸಿದರು.

ಭಾರತದ ಪರ: ಕುಲದೀಪ್‌ ಯಾದವ್‌ 3, ಜಸ್‌ಪ್ರೀತ್‌ ಬೂಮ್ರಾ 2, ವಿಜಯ್‌ ಶಂಕರ್‌ 2, ಜಡೇಜ 1, ಕೇದಾರ್‌ ಜಾಧವ್‌ 1 ವಿಕೆಟ್‌ ಪಡೆದರು.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2–0ರಲ್ಲಿ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.