ADVERTISEMENT

ಕ್ರಿಕೆಟ್‌: ಭಾರತಕ್ಕೆ ಮಣಿದ ಆಸ್ಟ್ರೇಲಿಯಾ

ಪಿಟಿಐ
Published 22 ಅಕ್ಟೋಬರ್ 2018, 17:47 IST
Last Updated 22 ಅಕ್ಟೋಬರ್ 2018, 17:47 IST
ಸ್ಮೃತಿ ಮಂದಾನ ಪಿಟಿಐ ಚಿತ್ರ
ಸ್ಮೃತಿ ಮಂದಾನ ಪಿಟಿಐ ಚಿತ್ರ   

ಮುಂಬೈ: ಏಕದಿನ ಸರಣಿ ಯಲ್ಲಿ ಹೀನಾಯ ಸೋಲು ಕಂಡ ಭಾರತ ‘ಎ’ ತಂಡದವರು ಆಸ್ಟ್ರೇಲಿಯಾ ‘ಎ’ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ. ಇಲ್ಲಿನ ಬಿಕೆಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ದವರು ನಾಲ್ಕು ವಿಕೆಟ್‌ಗಳಿಂದ ಗೆದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡದವರು ಅರು ವಿಕೆಟ್ ಕಳೆದುಕೊಂಡು 160 ರನ್‌ ಗಳಿಸಿದರು. ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ಬಳಗ 19ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿತು.

ತಂಡದ ಖಾತೆಯಲ್ಲಿ ನಾಲ್ಕು ರನ್‌ಗಳಿದ್ದಾಗ ಜೆಮಿಮಾ ರಾಡ್ರಿಗಸ್ ಮತ್ತು ತನಿಯಾ ಭಾಟಿಯಾ ಅವರನ್ನು ಕಳೆದುಕೊಂಡ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ (72; 40 ಎಸೆತ, 4 ಸಿಕ್ಸರ್ಸ್‌, 7 ಬೌಂಡರಿ) ಮತ್ತು ನಾಲ್ಕನೇ ಕ್ರಮಾಂಕದ ಆಟಗಾರ್ತಿ ಹರ್ಮನ್‌ಪ್ರೀತ್‌ ಆಸರೆಯಾದರು. ಮೂರನೇ ವಿಕೆಟ್‌ಗೆ ಇವರಿಬ್ಬರು 116 ರನ್‌ ಸೇರಿಸಿದರು.

ADVERTISEMENT

ಇವರಿಬ್ಬರು ಔಟಾದ ನಂತರ ಪೂಜಾ ವಸ್ತ್ರಕಾರ್ ಮಿಂಚಿದರು. ಒಂಬತ್ತು ಎಸೆತಗಳಲ್ಲಿ 21 ರನ್‌ ಗಳಿಸಿ ಅಜೇಯರಾಗಿ ಉಳಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6ಕ್ಕೆ 160 (ತಹಲಿಯಾ ಮೆಕ್‌ಗ್ರಾ 31, ನವೊಮಿ ಸ್ಟಾಲೆನ್‌ಬರ್ಗ್‌ 39, ಹಿದರ್ ಗ್ರಹಾಂ 43; ಪೂಜಾ ವಸ್ತ್ರಕಾರ್‌ 22ಕ್ಕೆ1, ಏಕ್ತಾ ಬಿಸ್ಟ್‌ 38ಕ್ಕೆ1, ದೀಪ್ತಿ ಶರ್ಮಾ 30ಕ್ಕೆ2, ಅನುಜಾ ಪಾಟೀಲ್‌ 22ಕ್ಕೆ2); ಭಾರತ: 19 ಓವರ್‌ಗಳಲ್ಲಿ 6ಕ್ಕೆ 163 (ಸ್ಮೃತಿ ಮಂದಾನ 72, ಹರ್ಮನ್‌ಪ್ರೀತ್ ಕೌರ್‌ 45, ಪೂಜಾ ವಸ್ತ್ರಕಾರ್‌ ಅಜೇಯ 21, ದೀಪ್ತಿ ಶರ್ಮಾ ಅಜೇಯ 11; ಲಾರೆನ್ ಚೀಟಲ್‌ 18ಕ್ಕೆ2, ಅಮಂಡಾ ಜೇಡ್ ವೆಲಿಂಗ್ಟನ್‌ 34ಕ್ಕೆ2). ಫಲಿತಾಂಶ: ಭಾರತಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.