ಭಾರತ ತಂಡ ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದೆ. ಆಟಗಾರರ ಪ್ರಯಾಣದ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಈ ಸಂದರ್ಭದಲ್ಲಿ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿರುವ ಶುಭ್ಮನ್ ಗಿಲ್ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರನ್ನು ನಾಯಕರಾದ ಬಳಿಕ ಮೊದಲ ಬಾರಿಗೆ ಭೇಟಿಯಾಗಿದ್ದಾರೆ.
ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಗಿಲ್ ಹೋಟೆಲ್ ಪ್ರವೇಶಿಸುತ್ತಿದ್ದಂತೆ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಿದರು. ಗಿಲ್‌ರನ್ನು ನೋಡುತ್ತಿದ್ದಂತೆ ರೋಹಿತ್ ಶರ್ಮಾ ಅಪ್ಪಿಕೊಂಡರು. ನಂತರ ಬಸ್ ಒಳಗೆ ವಿರಾಟ್ ಕೊಹ್ಲಿಯವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವಿವರಗಳು ಹೀಗಿವೆ
ಅಕ್ಟೋಬರ್ 19: ಭಾರತ vs ಆಸ್ಟ್ರೇಲಿಯಾ, 1ನೇ ಏಕದಿನ (ಪರ್ತ್)
ಅಕ್ಟೋಬರ್ 23: ಭಾರತ vs ಆಸ್ಟ್ರೇಲಿಯಾ, 2ನೇ ಏಕದಿನ (ಅಡಿಲೇಡ್)
ಅಕ್ಟೋಬರ್ 25: ಭಾರತ vs ಆಸ್ಟ್ರೇಲಿಯಾ, 3ನೇ ಏಕದಿನ (ಅಡಿಲೇಡ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.