ADVERTISEMENT

2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌

ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ

ಪಿಟಿಐ
Published 12 ನವೆಂಬರ್ 2021, 11:39 IST
Last Updated 12 ನವೆಂಬರ್ 2021, 11:39 IST
ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್‌– ಪಿಟಿಐ ಚಿತ್ರ
ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್‌– ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಮುಂದಿನ ವರ್ಷ ಇಲ್ಲಿ ನಿಗದಿಯಾಗಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿ ಮಹಿಳಾ ಕ್ರಿಕೆಟ್‌ಅನ್ನು ಆಡಿಸಲಾಗುತ್ತಿದ್ದು, ಭಾರತ ತಂಡಕ್ಕೆ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಾಗಿದೆ.

ಉಭಯ ತಂಡಗಳ ನಡುವೆ ಜುಲೈ 29ರಂದು ಈ ಪಂದ್ಯ ನಡೆಯಲಿದ್ದು, ಆಗಸ್ಟ್ ಏಳರಂದು ಫೈನಲ್ ಹಣಾಹಣಿ ನಿಗದಿಯಾಗಿದೆ ಎಂದು ಟೂರ್ನಿಯ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

ಟಿ20 ಮಾದರಿಯೊಂದಿಗೆಮಹಿಳಾ ಕ್ರಿಕೆಟ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಪದಾರ್ಪಣೆ ಮಾಡುತ್ತಿದೆ. ಕ್ವಾಲಾಲಂಪುರದಲ್ಲಿ ನಡೆದ 1998ರ ಆವೃತ್ತಿಯಲ್ಲಿ ಕೊನೆಯ ಬಾರಿ ಪುರುಷರ ಕ್ರಿಕೆಟ್‌ಅನ್ನು ಆಡಿಸಲಾಗಿತ್ತು.

ADVERTISEMENT

‌‘2022ರ ಜುಲೈ 2ರಿಂದ ಎಡ್ಜ್‌ಬಾಸ್ಟನ್ ಮಹಿಳಾ ಟಿ20 ಪಂದ್ಯಗಳು ನಡೆಯಲಿದ್ದು, ಆಗಸ್ಟ್ 7ರಂದು ಕಂಚು ಮತ್ತು ಚಿನ್ನದ ಪದಕದ ಸುತ್ತಿನ ಪಂದ್ಯಗಳು ನಿಗದಿಯಾಗಿವೆ‘ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.

ವೇಳಾಪಟ್ಟಿಯ ಪ್ರಕಾರ ಮೊದಲ ಪಂದ್ಯವು ಜುಲೈ 29ರಂದು ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ. ಇದೇ ದಿನಾಂಕದಂದು ಪಾಕಿಸ್ತಾನವು ವೆಸ್ಟ್‌ ಇಂಡೀಸ್‌ನ ಬಾರ್ಬಡಾಸ್‌ ವಿರುದ್ಧ ಆಡಲಿದೆ.

ಜುಲೈ 31ರಂದು ಪಾಕಿಸ್ತಾನ ವಿರುದ್ಧ ಭಾರತ ಸೆಣಸಲಿದ್ದು, ಆಗಸ್ಟ್ 3ರಂದು ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.