ADVERTISEMENT

IND vs ENG| ಕಡೇ ಓವರ್‌ನಲ್ಲಿ ಉರುಳಿದ 3ನೇ ವಿಕೆಟ್‌: ಇಂಗ್ಲೆಂಡ್‌ 263/3

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2021, 12:06 IST
Last Updated 5 ಫೆಬ್ರುವರಿ 2021, 12:06 IST
 ಡಾಮಿನಿಕ್ ಸಿಬ್ಲಿ  ಅವರ ವಿಕೆಟ್‌ ಕೆಡವಿದ ಸಂಭ್ರಮದಲ್ಲಿ ಜಸ್ಪ್ರಿತ್‌ ಬೂಮ್ರಾ (ಪಿಟಿಐ)
ಡಾಮಿನಿಕ್ ಸಿಬ್ಲಿ ಅವರ ವಿಕೆಟ್‌ ಕೆಡವಿದ ಸಂಭ್ರಮದಲ್ಲಿ ಜಸ್ಪ್ರಿತ್‌ ಬೂಮ್ರಾ (ಪಿಟಿಐ)   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್, ನಾಯಕ ಜೋ ರೂಟ್‌ ಅಜೇಯ ಶತಕ (128*) ಮತ್ತು ಡಾಮಿನಿಕ್ ಸಿಬ್ಲಿ (87) ನೆರವಿನೊಂದಿಗೆ ಮೊದಲ ದಿನದಾಟದ ಅಂತ್ಯಕ್ಕೆ 89.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದೆ.

ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ಗೆ ಕಡೇ ಓವರ್‌ನಲ್ಲಿ ಬೂಮ್ರಾ ಆಘಾತ ನೀಡಿದರು. 87 ರನ್‌ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಸಿಬ್ಲಿ ಅವರನ್ನು ಜಸ್ಪ್ರಿತ್‌ ಬೂಮ್ರಾ ಎಲ್‌ಬಿ ಬಲೆಗೆ ಕೆಡವಿದರು. ಈ ಮೂಲಕ ಸುರಕ್ಷಿತ ಭಾವದಲ್ಲಿದ್ದ ಇಂಗ್ಲೆಂಡ್‌ಗೆ ಕೊನೆ ಗಳಿಗೆಯಲ್ಲಿ ಪಟ್ಟು ಬಿದ್ದಿತು. ಸದ್ಯ, ಜೋ ರೂಟ್‌ ಎರಡನೇ ದಿನಕ್ಕೆ ವಿಕೆಟ್‌ ಉಳಿಸಿಕೊಂಡಿದ್ದಾರೆ.

ADVERTISEMENT

ಇದಕ್ಕೂ ಹಿಂದೆ, ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರೋರಿ ಬರ್ನ್ಸ್ (33) ಹೊರದಬ್ಬುವಲ್ಲಿ ಅಶ್ವಿನ್‌ ಯಶಸ್ವಿಯಾದರು. 60 ಎಸೆತಗಳನ್ನು ಎದುರಿಸಿದ ಬರ್ನ್ಸ್ ಎರಡು ಬೌಂಡರಿಗಳಿಂದ 33 ರನ್ ಗಳಿಸಿದರು. ಅದರ ಹಿಂದೆಯೇ ಇಂಗ್ಲೆಂಡ್‌ಗೆ ಮರು ಆಘಾತ ನೀಡಿದ್ದು ಬೂಮ್ರಾ. ಬೌಲಿಂಗ್‌ ದಾಳಿಗೆ ನಿಂತ ಜಸ್ಪ್ರಿತ್‌ ಬೂಮ್ರಾ ಅವರ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಡ್ಯಾನಿಯಲ್ ಲಾರೆನ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.

ಭಾರತದ ಪರ ಜಸ್ಪ್ರಿತ್‌ ಬೂಮ್ರಾ 18.3 ಓವರ್‌ ಮಾಡಿ, 40 ರನ್‌ ನೀಡಿ ಎರಡು ವಿಕೆಟ್ ಕಿತ್ತಿದ್ದಾರೆ. 24 ಓವರ್‌ ಮಾಡಿ 68 ರನ್‌ ನೀಡಿ ರವಿಚಂದ್ರನ್‌ ಅಶ್ವಿನ್‌ ಅವರು 1 ವಿಕಟ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.