ADVERTISEMENT

IND v NZ 3rd T20: ಗಿಲ್ ಚೊಚ್ಚಲ ಶತಕ, ನ್ಯೂಜಿಲೆಂಡ್ ಗೆಲುವಿಗೆ 235 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2023, 15:13 IST
Last Updated 1 ಫೆಬ್ರುವರಿ 2023, 15:13 IST
ಶುಭಮನ್ ಗಿಲ್
ಶುಭಮನ್ ಗಿಲ್   

ಅಹಮದಾಬಾದ್‌: ನ್ಯೂಜಿಲೆಂಡ್‌ ವಿರುದ್ಧ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭಮನ್ ಗಿಲ್ (126*) ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 234 ರನ್ ಗಳಿಸಿದೆ.

ಭಾರತ ಪರ ಶುಭಮನ್ ಗಿಲ್ 7 ಸಿಕ್ಸರ್, 12 ಬೌಂಡರಿ ಸಹಿತ 126 ರನ್ ಗಳಿಸಿ ಔಟಾಗದೆ ಉಳಿದರು. ಇತ್ತ ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ್ ಯಾದವ್ 24, ಹಾರ್ದಿಕ್ ಪಾಂಡ್ಯ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ನ್ಯೂಜಿಲೆಂಡ್ ಪರ ಮೈಕಲ್ ಬ್ರೇಸ್‌ವೆಲ್, ಬ್ಲೇರ್ ಟಿಕ್ನರ್, ಈಶ್ ಸೋಧಿ ಹಾಗೂ ಡೆರಿಲ್ ಮಿಚೆಲ್ ತಲಾ ಒಂದೊಂದು ವಿಕೆಟ್ ಪಡೆದರು.

ಮೊದಲ ಪಂದ್ಯವನ್ನು ನ್ಯೂಜಿಲೆಂಡ್‌ ಜಯಿಸಿದ್ದರೆ, ಲಖನೌದಲ್ಲಿ ನಡೆದಿದ್ದ ಎರಡನೇ ಪಂದ್ಯವನ್ನು ಭಾರತ ಗೆದ್ದು ಸಮಬಲ ಸಾಧಿಸಿತ್ತು. ತವರು ನೆಲದಲ್ಲಿ ಮತ್ತೊಂದು ಸರಣಿ ಗೆಲುವಿನ ಸಂಭ್ರಮ ಆಚರಿಸುವ ಸಿದ್ಧತೆಯೊಂದಿಗೆ ಹಾರ್ದಿಕ್‌ ಪಾಂಡ್ಯ ಬಳಗ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.