ADVERTISEMENT

IND vs NZ WTC Final: 3ನೇ ದಿನ, 217 ರನ್‌ಗೆ ಭಾರತ ಆಲೌಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2021, 14:51 IST
Last Updated 20 ಜೂನ್ 2021, 14:51 IST
ಟೀಂ ಇಂಡಿಯಾ ಉಪ ನಾಯಕ ಅಜಿಂಕ್ಯ ರಹಾನೆ
ಟೀಂ ಇಂಡಿಯಾ ಉಪ ನಾಯಕ ಅಜಿಂಕ್ಯ ರಹಾನೆ   

ಸೌತಾಂಪ್ಟನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ ಗಳಿಗೆ ಆಲೌಟ್‌ ಆಗಿದೆ.

ಶುಕ್ರವಾರವೇ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಹೀಗಾಗಿ ಟಾಸ್‌ ಕೂಡ ಸಾಧ್ಯವಾಗಿರಲಿಲ್ಲ.ಎರಡನೇ ದಿನ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆಉತ್ತಮ ಜೊತೆಯಾಟವಾಡಿದ್ದ ನಾಯಕ ವಿರಾಟ್‌ ಕೊಹ್ಲಿ ಮೂರನೇ ದಿನ ಬೇಗನೆವಿಕೆಟ್‌ ಒಪ್ಪಿಸಿದರು.

ಶನಿವಾರ 44 ರನ್‌ ಗಳಿಸಿದ್ದ ಕೊಹ್ಲಿ ಮತ್ತು 29 ರನ್‌ ಗಳಿಸಿದ್ದ ರಹಾನೆ 3ನೇ ದಿನದಾಟ ಆರಂಭಿಸಿದರು. ಆದರೆ ಕೊಹ್ಲಿ, ಇಂದು ಒಂದೂ ರನ್‌ ಗಳಿಸದೆಕೈಲ್‌ ಜೆಮಿಸನ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (4) ಅವರೂ ನಾಯಕನ ಹಿಂದೆಯೇ ಪೆವಿಲಿಯನ್‌ ಸೇರಿಕೊಂಡರು.

ADVERTISEMENT

ಮೂರನೇ ದಿನ ತಂಡದ ಮೊತ್ತಕ್ಕೆಕೇವಲ 16ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ರಹಾನೆ ಆಸರೆಯಾಗುವ ಪ್ರಯತ್ನ ಮಾಡಿದರು. ಆದರೆ ನೈಲ್‌ ವಾಗ್ನರ್‌ ಅದಕ್ಕೆ ಅವಕಾಶ ನೀಡಲಿಲ್ಲ.117 ಎಸೆತಗಳನ್ನು ಎದುರಿಸಿದ್ದ ರಹಾನೆ49 ರನ್‌ ಗಳಿಸಿದ್ದ ವೇಳೆ ವಾಗ್ನರ್‌ ಬೌಲಿಂಗ್‌ನಲ್ಲಿ ಟಾಮ್‌ ಲಾಥಮ್‌ಗೆಕ್ಯಾಚ್‌ ನೀಡಿ ನಿರ್ಗಮಿಸಿದರು.

ನಂತರ3 ಬೌಂಡರಿ ಸಹಿತ 22 ರನ್‌ ಕಲೆಹಾಕಿದ್ದ ಆರ್‌ ಅಶ್ವಿನ್‌, 86ನೇ ಓವರ್‌ನಲ್ಲಿ ಟಿಮ್‌ ಸೌಥಿ ದಾಳಿಯಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಇಶಾಂತ್‌ ಶರ್ಮಾ (4), ಜಸ್‌ಪ್ರೀತ್‌ ಬೂಮ್ರಾ (0) ಹೆಚ್ಚು ಹೊತ್ತು ನಿಲ್ಲಲಿಲ್ಲ.

ತಾಳ್ಮೆಯ ಆಟವಾಡುತ್ತಿದ್ದರವೀಂದ್ರ ಜಡೆಜಾ (53 ಎಸೆತಗಳಲ್ಲಿ15 ರನ್‌) ಕೊನೆಯ ವಿಕೆಟ್‌ ರೂಪದಲ್ಲಿ ಔಟಾಗುವುದರೊಂದಿಗೆ ಭಾರತದ ಇನಿಂಗ್ಸ್‌ಗೆ ತೆರೆ ಬಿದ್ದಿತು.

ಸದ್ಯ ನ್ಯೂಜಿಲೆಂಡ್‌ ಇನಿಂಗ್ಸ್‌ ಆರಂಭವಿಸಿದ್ದು, ಯಾವುದೇ ವಿಕೆಟ್‌ ನಷ್ಟವಿಲ್ಲದೆ19 ಓವರ್‌ಗಳಲ್ಲಿ31ರನ್‌ ಗಳಿಸಿದೆ. ಅನುಭವಿ ಟಾಮ್‌ ಲಾಥಮ್‌ (16) ಮತ್ತು ಡೆವೋನ್‌ ಕಾನ್ವೆ (14)ಕ್ರೀಸ್‌ನಲ್ಲಿದ್ದಾರೆ.

ಭಾರತದ ಕಾಲಮಾನ ರಾತ್ರಿ 11.30ರ ವರೆಗೆ ಪಂದ್ಯ ಮುಂದುವರಿಯಲಿದೆ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ಸೌತಾಂಪ್ಟನ್‌ನ ಏಜಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಶನಿವಾರದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.