ADVERTISEMENT

Womens WC: ಪಾಕ್ ಜೊತೆ ಹಸ್ತಲಾಘವ ಮಾಡ್ತಾರಾ ಭಾರತ ಮಹಿಳಾ ಆಟಗಾರ್ತಿಯರು?

ಪಿಟಿಐ
Published 2 ಅಕ್ಟೋಬರ್ 2025, 6:48 IST
Last Updated 2 ಅಕ್ಟೋಬರ್ 2025, 6:48 IST
<div class="paragraphs"><p>ಫೋಟೊ ಕೃಪೆ: ಪಿಟಿಐ</p></div>

ಫೋಟೊ ಕೃಪೆ: ಪಿಟಿಐ

   

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಈ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಪುರುಷರ ಏಷ್ಯಾ ಕಪ್‌ ಟೂರ್ನಿಯಲ್ಲಿ ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟು ಮುಂದುವರೆದಿತ್ತು. ಇದೀಗ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯದಲ್ಲಿ ಕೂಡ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಪಾಕಿಸ್ತಾನದ ಜೊತೆಗೆ ಸಾಂಪ್ರದಾಯಿಕ ಹಸ್ತಲಾಘವ ಮಾಡದಿರಲು ನಿರ್ಧರಿಸಿದೆ ಎಂದು ಬಿಸಿಸಿಐನ ಉನ್ನತ ಮೂಲಗಳು ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.

ADVERTISEMENT

ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ–20 ಟೂರ್ನಿಯ ಫೈನಲ್ ಪಂದ್ಯ ಸೇರಿದಂತೆ ಮೂರು ಬಾರಿಯ ಮುಖಾಮುಖಿಯಲ್ಲೂ ಟೀಂ ಇಂಡಿಯಾ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು.

ಫೈನಲ್‌ನಲ್ಲಿ ಗೆದ್ದರೂ ಪಾಕ್‌ ಸಚಿವ, ಎಸಿಸಿ ಅಧ್ಯಕ್ಷ ಮೊಹಸೀನ್‌ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತ್ತು. ತಮ್ಮ ಜೊತೆಯಲ್ಲಿ ಟ್ರೋಫಿಯನ್ನು ಕೊಂಡೊಯ್ಯವ ಮೂಲಕ ನಖ್ವಿ ವಿವಾದಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದರು.

ಮಹಿಳಾ ಕ್ರಿಕೆಟ್‌ನಲ್ಲೂ ಹಸ್ತಲಾಘವ ಇರುವುದಿಲ್ಲ

'ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಟಾಸ್‌ ಸಂದರ್ಭದಲ್ಲಿ ಸಾಂಪ್ರದಾಯಿಕ ಹಸ್ತಲಾಘವ, ಮ್ಯಾಚ್ ರೆಫರಿ ಜೊತೆಗಿನ ಫೋಟೊಶೂಟ್ ಮತ್ತು ಪಂದ್ಯದ ಬಳಿಕ ಕೂಡ ಹಸ್ತಲಾಘವ ಇರುವುದಿಲ್ಲ. ಪುರುಷರು ಅನುಸರಿಸಿದ ನೀತಿಯನ್ನೇ ಮಹಿಳಾ ತಂಡ ಕೂಡ ಅನುಸರಿಸಲಿದೆ' ಎಂದು ಬಿಸಿಸಿಐನ ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.