ADVERTISEMENT

ವೆಸ್ಟ್‌ ಇಂಡೀಸ್ 104ಕ್ಕೆ ಆಲೌಟ್: ಭಾರತಕ್ಕೆ ಸುಲಭ ಗುರಿ

ಭಾರತ– ವೆಸ್ಟ್‌ ಇಂಡೀಸ್ ಏಕದಿನ ಕ್ರಿಕೆಟ್ ಸರಣಿ

ಏಜೆನ್ಸೀಸ್
Published 1 ನವೆಂಬರ್ 2018, 10:40 IST
Last Updated 1 ನವೆಂಬರ್ 2018, 10:40 IST
   

ತಿರುವನಂತಪುರ: ಇಲ್ಲಿನ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ ಐದನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.

ಭಾರತದ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್ 104 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ, ಭಾರತಕ್ಕೆ ಗೆಲ್ಲಲು 105 ರನ್‌ಗಳ ಸುಲಭ ಗುರಿ ನಿಗದಿಯಾಗಿದೆ.

ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 4, ಖಲೀಲ್ ಅಹ್ಮದ್ ಮತ್ತು ಜಸ್ಪ್ರೀತ್ ಬೂಮ್ರಾ ತಲಾ ಎರಡು ವಿಕೆಟ್‌ ಪಡೆದಿದ್ದಾರೆ.

ಭಾರತದ ವಿರುದ್ಧ ಟಾಸ್‌ ಗೆದ್ದುಕೊಂಡಿದ್ದ ವೆಸ್ಟ್‌ ಇಂಡೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು.

ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿರುವ ಭಾರತ ತಂಡ ಇಂದಿನ ಪಂದ್ಯ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.