ಶುಭಮನ್ ಗಿಲ್, ಕೆ.ಎಲ್. ರಾಹುಲ್
(ಚಿತ್ರ ಕೃಪೆ: ಬಿಸಿಸಿಐ)
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕ ವೆಸ್ಟ್ ಇಂಡೀಸ್ 121 ರನ್‌ಗಳ ಸುಲಭ ಟಾರ್ಗೆಟ್ ನೀಡಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 4ನೇ ದಿನದಾಟದ ಅಂತ್ಯಕ್ಕೆ 63\1 ಕಳೆದುಕೊಂಡು ಸುಭದ್ರ ಸ್ಥಿಯಿಲ್ಲಿದೆ.
ಟೀಂ ಇಂಡಿಯಾದ ಗೆಲುವಿಗೆ ಇನ್ನೂ 58 ರನ್‌ಗಳ ಅಗತ್ಯವಿದ್ದು, 25 ರನ್ ಗಳಿಸಿರುವ ಕೆ.ಎಲ್. ರಾಹುಲ್ ಹಾಗೂ 30 ರನ್ ಗಳಿಸಿರುವ ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ. ವಿಂಡೀಸ್ ಪರ ಜೋಮೆಲ್ ವಾರಿಕನ್ 1 ವಿಕೆಟ್ ಪಡೆದುಕೊಂಡಿದ್ದಾರೆ.
ವಿಂಡೀಸ್ ದಿಢೀರ್ ಕುಸಿತ
311 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾಗ ಜಸ್ಟೀನ್ ಗ್ರೀವ್ಸ್ ಹಾಗೂ ಜೇಡನ್ ಸೀಲ್ಸ್ ಅವರ 79 ರನ್‌ಗಳ ಕೊನೆಯ ವಿಕೆಟ್ ಜೊತೆಯಾಟದ ನೆರವಿನಿಂದ ಅಂತಿಮವಾಗಿ 390 ರನ್‌ಗಳಿಗೆ ಸರ್ವಪಥನ ಕಂಡಿದೆ. ಭಾರತದ ಪರ ಜಸ್‌ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದುಕೊಂಡರು.
ನಾಲ್ಕನೇ ದಿನದ ಊಟದ ವಿರಾಮಕ್ಕೆ 78 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 252 ರ್ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದ್ದ ವಿಂಡೀಸ್ ಬ್ಯಾಟರ್‌ಗಳು ಊಟದ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿದರು.
ವಿಂಡೀಸ್ ಪರ ಕ್ಯಾಂಪ್‌ಬೆಲ್ 199 ಎಸೆತಗಳಲ್ಲಿ 115 ರನ್ ಗಳಿಸಿ (12 ಬೌಂಡರಿ, 3 ಸಿಕ್ಸರ್) ಔಟ್ ಆದರು. ಕಲಾತ್ಮಕ ಇನಿಂಗ್ಸ್ ಕಟ್ಟಿದ ಹೋಪ್ 214 ಎಸೆತಗಳಲ್ಲಿ 103 ರನ್ ಗಳಿಸಿ (12 ಬೌಂಡರಿ, 2 ಸಿಕ್ಸರ್) ಔಟ್ ಆದರು. ನಾಯಕ ರೋಸ್ಟನ್ ಚೇಸ್ 40 ರನ್, ಜಸ್ಟೀನ್ ಗ್ರೀವ್ಸ್ ಅಜೇಯ 50 ಹಾಗೂ ಜೇಡನ್ ಗ್ರೀವ್ಸ್ 32 ರನ್ ಗಳಿಸಿದರು.
ಭಾರತದ ಪರ ಕುಲದೀಪ್ ಯಾದವ್ ಹಾಗೂ ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಜಡೇಜಾ ಹಾಗೂ ವಾಷಿಂಗ್‌ಟನ್ ಸುಂದರ್ ಕೂಡ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
ಈ ಮೊದಲು ಯಶಸ್ವಿ ಜೈಸ್ವಾಲ್ (175) ಹಾಗೂ ನಾಯಕ ಶುಭಮನ್ ಗಿಲ್ (129*) ಅಮೋಘ ಶತಕಗಳ ಬೆಂಬಲದೊಂದಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.