ರವೀಂದ್ರ ಜಡೇಜಾ ಹಾಗೂ ಧ್ರುವ್ ಜುರೇಲ್
– ಪಿಟಿಐ ಚಿತ್ರ
ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟ ಆರಂಭಕ್ಕೂ ಮುನ್ನ ಭಾರತ ತಂಡ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಎರಡನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್‌ಗಳಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದೆ. 286 ರನ್ ಮುನ್ನಡೆ ಗಳಿಸಿದೆ.
ದಿನದ ಆರಂಭದಲ್ಲಿ ಪಿಚ್ ವರ್ತನೆಯ ಲಾಭ ಪಡೆಯಲು ಡಿಕ್ಲೇರ್ ಮಾಡಲು ಭಾರತ ತಂಡ ನಿರ್ಧರಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 162 ರನ್‌ಗೆ ಆಲೌಟ್ ಆಗಿತ್ತು. ಕೆ.ಎಲ್ ರಾಹುಲ್ (100), ಧ್ರುವ್ ಜುರೇಲ್ (125) ಹಾಗೂ ರವೀಂದ್ರ ಜಡೇಜಾ (ಅಜೇಯ 104) ರನ್ ನೆರವಿನಿಂದ ಭಾರತ 448 ರನ್ ಪೇರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.